Header Ads
Breaking News

ರಾಷ್ಟ್ರಪತಿ ಭವನಕ್ಕೆ ಕಾರ್ಕಳದ ಶಿಲಾಮೂರ್ತಿ ಹಸ್ತಾಂತರ

ಕಾರ್ಕಳದ ವಿಜಯಶಿಲ್ಪ ಶಾಲೆಯಲ್ಲಿ ರಚನೆಯಾದ 10ಶಿಲಾಪ್ರತಿಮೆಗಳನ್ನು ರಾಷ್ಟ್ರಪತಿ ಭವನಕ್ಕೆ ಹಸ್ತಾಂತರಿಸುವ ಕಾರ್ಯಕ್ರಮವು ಕಾರ್ಕಳದ ಖಾಸಗಿ ಹೋಟೆಲ್‍ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಲಹಸ್ತೆಂದ್ರ ಸರಸ್ವತಿ ಮಹಾಸ್ವಾಮಿ ಅವರು, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಶಿಲ್ಪಿ ಸತೀಶ್ ಆಚಾರ್ಯ ಅವರು, ಕಾರ್ಕಳವು ಅತಿ ಪುರಾತನ ಕಾಲದಿಂದಲೂ ಶಿಲ್ಪಕಲೆಗೆ ಕೀರ್ತಿಯನ್ನು ತಂದುಕೊಟ್ಟ ಊರಾಗಿದೆ. ಶ್ರೀಮಾನ್ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಮ್ಮ ಶಿಲ್ಪಕಲೆಗೆ ತುಂಬಾ ಪ್ರೋತ್ಸಾಹವನ್ನು ಮಾಡಿದ್ದಾರೆ ಎಂದು ಹೇಳಿದರು. ಆನಂತರ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ಕಲಾಕೃತಿಗಳ ಉದ್ಘಾಟನೆಯನ್ನು ಮಾಡಿ ಮಾತನಾಡಿ, ಹಿಂದಿನ ಸಂಸ್ಕೃತಿಯನ್ನು ಇಂದು ಜನತೆಗೆ ತೋರಿಸುವವನು ಶಿಲ್ಪಿ. ಶಿಲ್ಪ ಕೆಲಸವನ್ನು ಮಾಡುವವನು ಕೂಲಿಯಲ್ಲ ಶಿಲ್ಪಶಾಸ್ತ್ರದಲ್ಲಿ ಪರಿಣತಿ ಹೊಂದಿದವನು ಶಿಲ್ಪಿ ಆಗುತ್ತಾನೆ ಎಂದರು.
ನಂತರ ಶಿಲ್ಪ ಗುರು ಲಕ್ಷ್ಮೀನಾರಾಯಣ ಆಚಾರ್ಯರವರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಕಾರ್ಕಳದ ಶಾಸಕರಾದ ವಿ. ಸುನಿಲ್ ಕುಮಾರ್ ಅವರು, ಕಾರ್ಕಳದ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಇಲ್ಲಿಯ ಶಿಲ್ಪಕಲೆಗಳು ಎದ್ದು ಕಾಣುತ್ತವೆ. ಇಲ್ಲಿ ಕೆತ್ತಿದ ಮೂರ್ತಿಗಳು ರಾಷ್ಟ್ರಪತಿ ಭವನಕ್ಕೆ ಹೋಗುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ವೇದಿಕೆಯಲ್ಲಿ ಶಿಲ್ಪಕಲಾ ಅಧಿಕಾರಿ ಅಪ್‍ಲಹ್ ಹಸನ್, ವಿಠ್ಠಲ ಭಂಡಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *