Header Ads
Header Ads
Breaking News

ರಾಷ್ಟ್ರಪ್ರೇಮ ಮೂಡಿಸಲು ಅಂಚೆ ಇಲಾಖೆಯಿಂದ ವಿನೂತನ ಕಾರ್ಯಕ್ರಮ

ಇಂದಿನ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಮೂಡಿಸುವ ಉದ್ದೇಶದಿಂದ ಅಂಚೆ ಇಲಾಖೆಯಿಂದ ನೂತನ ಕಾರ್ಯಕ್ರಮ ನಡೆಯುತ್ತಿದ್ದು, ತಾಯಿ ನಾಡಿಗೆ ನನ್ನ ಪತ್ರ ಎನ್ನುವ ವಿಷಯದ ಮೇಲೆ ಪತ್ರಗಳನ್ನು ಬರೆದು ಅಂಚೆ ಮಾಡುವ ಮೂಲಕ ರಾಷ್ಟ್ರ ಪ್ರೇಮದ ಬಗ್ಗೆ ಪತ್ರ ಬರೆಯುವ ಸ್ಪರ್ಧೆಯನ್ನು ವಿವಿಧ ಶಾಲೆಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮದ ಜೊತೆಗೆ ಸಾಹಿತ್ಯ ಅಭಿರುಚಿ ಮತ್ತು ಬರವಣಿಗೆ ಕೌಶಲ್ಯ ಅಭಿವೃದ್ದಿಗೆ ಅಂಚೆ ಇಲಾಖೆ ಮುಂದಾಗಿದೆ.ಭಾರತೀಯ ಅಂಚೆ ಇಲಾಖೆ ಜೂನ್15 ರಂದು ತಾಯಿನಾಡಿಗೆ ನನ್ನ ಪತ್ರ ಎಂಬ ವಿನೂತನ ಕಾರ್ಯಕ್ರಮ ಆರಂಭಗೊಂಡಿದ್ದು ಅಕ್ಟೋಬರ್ 31ಕ್ಕೆ ಪತ್ರ ಬರವಣಿಕೆ ಕಾರ್ಯಕ್ರಮ ಕೊನೆಗೊಳ್ಳಲಿದೆ. ದಾಯ್ ಅಕ್‌ಹರ್ ಪತ್ರ ಬರವಣಿಕೆಯನ್ನು ಆಯೋಜನೆ ಮಾಡುತ್ತಿದೆ. ತಾಯಿ ನಾಡು, ತಾಯಿ ನೆಲದ ಮೇಲೆ ಅಭಿಮಾನ ಹುಟ್ಟಿಕೊಳ್ಳುವಂತಹ ಸ್ಪರ್ಧಾ ಕಾರ್ಯಕ್ರಮ ಇದಾಗಿದ್ದು ಎರಡು ಹಂತಗಳಲ್ಲಿ ಸ್ಪರ್ಧೆ ನಡೆಯುತ್ತದೆ. ರಾಷ್ಟ್ರೀಯ ಮಟ್ಟದ ಸ್ಪರ್ಧೇಯಲ್ಲಿ ೧೮ ವರ್ಷದೊಳಗಿನ ಮಕ್ಕಳಿಗೆ ಮತ್ತು 1ವರ್ಷದ ಮೇಲ್ಪಟ್ಟ ಯುವ ಜನರಿಗೆ ಸ್ಪೆರ್ಧೆಯನ್ನು ಅಂಚೆ ಇಲಾಖೆ ಮಾಡುತ್ತಿದೆ. ಸುಳ್ಯದ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪತ್ರ ಬರವಣಿಗೆ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಇದರಲ್ಲಿ ಹಲವು ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಯ ಮೇಲೆ ತನ್ನ ಬರವಣಿಗೆಯನ್ನು ಬರೆದು ಅಂಚೆ ಪೆಟ್ಟಿಗೆಯೊಳಗೆ ಹಾಕಿ ಪೋಸ್ಟ್ ಮಾಡಿದರು. ತಾಯಿನಾಡಿಗೆ ನನ್ನ ಪತ್ರ ವಿಷಯದ ಮೇಲೆ ಎ೪ ಹಾಳೆಯಲ್ಲಿ500 ಶಬ್ದಗಳಿಂದ 1000ಶಬ್ದಗಳಿಗೆ ಮೀರದಂತೆ ಪತ್ರ ಬರೆಯಬೇಕು. ತಾಯಿನಾಡಿಗೆ ನನ್ನ ಪತ್ರವನ್ನು ಕೈ ಬರಹದ ಮೂಲಕ ಬೆಂಗಳೂರಿನ ಮುಖ್ಯ ಅಂಚೆ ಪಾಲಕರು ಬೆಂಗಳೂರು ಇವರ ವಿಳಾಸಕ್ಕೆ ಕಳುಹಿಸಬೇಕು. ವಿದ್ಯಾರ್ಥಿಗಳು ಪತ್ರಗಳನ್ನು ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಯಲ್ಲಿ ಬರೆದು ಕಳುಹಿಸಿಕೊಡಲು ಅವಕಾಶ ಇದೆ. ಪತ್ರ ಬರೆಯುವ ಸ್ಪರ್ಧೆಗೆ ವ್ಯಾಪ್ತಿಯೊಳಗೆ ವಿಜೇತರಾದ ಪ್ರಥಮಸ್ಥಾನಿಗೆ25,000, ದ್ವಿತೀಯ ಸ್ಥಾನಿಗೆ 10,000 ಮತ್ತು 5,000ನೀಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ 50,000,125000, ಮತ್ತು 10,000ರೂಗಳನ್ನು ಮೊದಲ ಮೂರು ಸ್ಥಾನಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ನೀಡಲು ಇಲಾಖೆ ಉದ್ದೇಶಿಸಿದೆ. ಈ ಬಗ್ಗೆ ಸುಳ್ಯ ಅಂಚೆ ಇಲಾಖೆಯ ಅಂಚೆ ನಿರೀಕ್ಷಕ ಮೇಲ್ವಿನ್ ಅರುಣ್ ಪ್ರತಿಕ್ರೀಯೆ ನೀಡಿ ತಾಯಿ ನಾಡಿಗೆ ನನ್ನ ಪತ್ರ ವಿಷಯದ ಮೇಲೆ ಪತ್ರ ಬರವಣಿಗೆ ಸ್ಪರ್ಧೆಯನ್ನು ಭಾರತ ಸರಕಾರದ ಅಂಚೆ ಇಲಾಖೆ ಹೊಂದಿದೆ. ಮಕ್ಕಳಲ್ಲಿ ಮತ್ತು ಯುವಜನರಲ್ಲಿ ದೇಶದ ಮೇಲೆ ರಾಷ್ಟ್ರಪ್ರೇಮ ವೃದ್ದಿಯಾಗಬೇಕು ಮತ್ತು ಸಾಹಿತ್ಯ ಹಾಗೂ ಬರವಣಿಗೆ ಕೌಶಲ್ಯ ಅಭಿವೃದ್ದಿ ಹೆಚ್ಚಾಗಬೇಕು ಎನ್ನುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ. ಶಾಲೆಯ ಸ್ಪರ್ಧಿ ಕೀರ್ತಿ ಅನಿಸಿಕೆ ವ್ಯಕ್ತಪಡಿಸಿ ಪ್ರಸ್ತುತ ಸಮಾಜದಲ್ಲಿ ತಾಯಿನಾಡಿಗೆ ಪತ್ರ ಬರೆಯುವ ಸ್ಪೆರ್ಧೆಯನ್ನು ಅಂಚೆ ಇಲಾಖೆ ಮಾಡುತಿರುವುದು ಒಳ್ಳೆಯ ಬೆಳವಣಿಗೆ. ಯುವ ಜನರಲ್ಲಿ ದೇಶ ಪ್ರೇಮ ಬೆಳೆದರೆ ದೇಶದ ಹಿತದೃಷ್ಟಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

Related posts

Leave a Reply