Header Ads
Breaking News

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ 63 ಚಿನ್ನದ ಪದಕ; ಬಹುಮಾನ ಗೆದ್ದ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಇತ್ತೀಚೆಗೆ ಉಡುಪಿಯ ಅಂಬಲಪಾಡಿಯಲ್ಲಿ ಬುಡೋಕಾನ್ ಕರಾಟೆ ಮತ್ತು ಸ್ಪೋಟ್ರ್ಸ ಅಸೋಸಿಯೇಷನ್ ವತಿಯಿಂದ ಜರುಗಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯಮಾಟೋ ಶೋಟೋಕಾನ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ನ ಕರಾಟೆ ವಿದ್ಯಾರ್ಥಿಗಳು 63 ಚಿನ್ನದ ಪದಕ ಸಹಿತ ಒಟ್ಟು 94 ಬಹುಮಾನವನ್ನು ಗೆದ್ದುಕೊಂಡಿದ್ದು ವಿಜೇತರಿಗೆ ಅಭಿನಂದಾನ ಸಮಾರಂಭ ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶಾ ಸಭಾಂಗಣದಲ್ಲಿ ನಡೆಯಿತು.

ಯಮಾಟೋ ಶೋಟೋಕಾನ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್‍ನ ಮುಖ್ಯ ಶಿಕ್ಷಕ ಕಿಯೋಶಿ ಶಾಜು ಮುಲಾವನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸರಿಯಾದ ತರಬೇತಿ ಪಡೆದು ಕರಾಟೆಯನ್ನು ಅಭ್ಯಸಿಸಿದಾಗ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ಸ್ಪರ್ಶಾ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್, ನಕ್ಸಲ್ ನಿಗ್ರಹ ಪಡೆಯ ಕನಕರಾಜ್ ಆರ್., ಭೂಸೇನೆಯ ಯೋಧ ಯತೀಶ್ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *