Header Ads
Header Ads
Breaking News

ರಾಷ್ಟ್ರಮಟ್ಟದ ವಿಚಾರ ಸಂಕಿರಣ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜನೆ. ಸೆ10 ಮತ್ತು11ರಂದು ನಡೆಯಲಿರುವ ಕಾರ್ಯಕ್ರಮ. ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮಾಹಿತಿ.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ನ್ಯಾಷನಲ್ ಅಸೋಸಿಯೇಶನ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋ ಐಸೋಟೋಪ್ ಆಂಡ್ ರೇಡಿಯೇಶನ್ ಸಹಯೋಗದೊಂದಿಗೆ ವಿಕಿರಣ ವಸ್ತುಗಳು ಮತ್ತು ವಿಕಿರಣದ ಉಪಯೋಗಗಳು ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ಅವರು ತಿಳಿಸಿದರು.ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು ಸೆಪ್ಟಂಬರ್10 ಮತ್ತು 11ರಂದು ಕಾಲೇಜಿನ ಎಲ್‌ಎಫ್ ರಸ್ಕೀನ್ನಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಈ ವಿಚಾರ ಸಂಕಿರಣದಲ್ಲಿ ವಿಕಿರಣಶೀಲ ವಸ್ತುಗಳ ಮತ್ತು ವಿಕಿರಣದ ಉಪಯೋಗಗಳಲ್ಲಿ ಪ್ರಮುಖವಾಗಿ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅವುಗಳ ಮಹತ್ವವನ್ನು ಚರ್ಚಿಸಲಾಗುವುದು. ಸಚಿವ ಯು.ಟಿ. ಖಾದರ್ ಅವರು ಸೆಪ್ಟಂಬರ್ ೧೦ರಂದು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಪ್ರಕಾಶ್ ಕಾಮತ್, ಚಂದ್ರಶೇಖರ ಶೆಟ್ಟಿ, ರೀಠ, ಚಂದ್ರಕಲಾ ಉಪಸ್ಥಿತರಿದ್ದರು.

Related posts

Leave a Reply