Header Ads
Header Ads
Breaking News

ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಸಾಲಿಗ್ರಾಮದಲ್ಲಿ ಫೆ.9ರಿಂದ 11ರ ವರೆಗೆ ಆಯೋಜನೆ

 

ಇಲೆವೆನ್‌ಅಪ್ ಸ್ಪೋರ್ಟ್ಸ್ ಕ್ಲಬ್ ಕೋಟ ಅಶ್ರಯದಲ್ಲಿ ಕೋಟ ಪರಿಸರದಲ್ಲಿ ಪ್ರಥಮಬಾರಿಗೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಲೆವೆನ್ ಅಪ್ ಟ್ರೋಫ಼ಿ-2018 ಫೆ. 9, 10 ಮತ್ತು 11ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ನಡೆಯಲಿದೆ ಎಂದು ಪಂದ್ಯಾವಳಿ ಸಮಿತಿ ಜಂಟಿ ಕಾರ್ಯದರ್ಶಿ ರಾಘವೇಂದ್ರ ತುಂಗ ತಿಳಿಸಿದು.ಅವರು ಬ್ರಹ್ಮಾವರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.ದೇಶದ ಬೇರೆ-ಬೇರೆ ರಾಜ್ಯಗಳ ಪ್ರತಿಭಾನ್ವಿತ ಆಟಗಾರರು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಈ ಪ್ರಯುಕ್ತ ಫೆ. 9ರಂದು ಸಂಜೆ 6ಗಂಟೆಗೆ ಪಂದ್ಯಾಟ ಉದ್ಘಾಟನೆ, ಫೆ. 10ರಂದು ಸಂಜೆ ಸ್ಥಳೀಯ ಸಾಧಕರಿಗೆ ಸಮ್ಮಾನ, ಫೆ. 11ರಂದು ಸಮಾರೋಪ ಹಾಗೂ ಪಂದ್ಯಾಟದ ಸಂದರ್ಭ ಸೈನಿಕ ಕಲ್ಯಾಣ ನಿದಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾವಳಿ ಸಮಿತಿಯ ಗೌರವಾಧ್ಯಕ್ಷ, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಕ್ರೀಡಾಸಮಿತಿ ಕಾರ್ಯದರ್ಶಿ ಸೀತಾರಾಮ್ ಆಚಾರ್, ಖಜಾಂಚಿ ಶಶಿಧರ್ ಆಚಾರ್, ಸಚಿನ್ ಕಾರಂತ್ ಉಪಸ್ಥಿತರಿದ್ದರು.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply