Breaking News

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ಆಗ್ರಹ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗೆ ಖಂಡನೆ ಬೈಂದೂರಿನಲ್ಲಿ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

 

ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಅಗ್ರಹಿಸಿ ಬೈಂದೂರು ಯುವ ಕಾಂಗ್ರೆಸ್ ಸಮಿತಿಯಿಂದ ಬೈಂದೂರಿನ ಸ್ಟೇಟ್ ಬ್ಯಾಂಕ್ ಎದುರುಗಡೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಸುಮಾರು ೮೦ ಕೋಟಿ ಉಡುಪಿ ಜಿಲ್ಲೆಗೆ ಸಾಲ ರಾಜ್ಯ ಸರ್ಕಾರ ಮನ್ನಾ ಮಾಡಿದೆ, ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು ಎಂದು ಯುವ ಕಾಂಗ್ರೇಸ್ ಒತ್ತಾಯಿಸಿದರು. ಬೈಂದೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಇವರು ಕಳೆದ ಮೂರು ವರ್ಷಗಳಿಂದ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಬಡ ರೈತರ ಬಗ್ಗೆ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳಲಿಲ್ಲ. ಮೋದಿಯವರು ನೋಟ್ ಬ್ಯಾನ್, ಮುದ್ರಾ ಯೋಜನೆ, ಹಾಗೂ ಪ್ರದಾನಿಮಂತ್ರಿ ಉಜ್ವಲಾ ಹೊಸ ಅನಿಲ ಸಂಪರ್ಕ ಮೇಳ ಹಾಗೂ ಸುರಕ್ಷಾ ಶಿಬಿರ ಮುಂತಾದ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ, ಆದರೆ ನಮ್ಮ ಬಡ ರೈತರಿಗೆ ಯಾವುದೇ ಕಾರ್ಯವನ್ನು ಹಮ್ಮಿಕೊಂಡಿಲ್ಲ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ರೈತರಿಗೆ ತಲಾ ೫೦,೦೦೦ ಸಾವಿರ ರೂಪಾಯಿ ಸಾಲಮನ್ನಾವನ್ನು ಮಾಡಿದ್ದಾರೆ ಎಂದರು.

ಯುವ ಕಾಂಗ್ರೆಸ್‌ವತಿಯಿಂದ ಬೈಂದೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಘೂ ಬೈಂದೂರು ವಿಶೇಷ ತಹಶೀಲ್ದಾರರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ್ ಗಾಣಿಗ, ತಾ.ಪಂ. ಸದಸ್ಯ ಜಗದೀಶ್ ದೇವಾಡಿಗ, ಖಂಬದಕೋಣೆ ಪಂಚಾಯತ್ ಅಧ್ಯಕ್ಷ ರಾಜೇಶ್ ದೇವಾಡಿಗ, ಯುವ ಕಾಂಗ್ರೆಸ್ ಕಾರ್ಯಕರ್ತರಾದ ಬೈಜೂ ಮೂದ್ದೂರು, ಸನಾತ ಬಳೆಗಾರ್, ಕೀಸಾನ್ ರೈತರ ಪ್ರದಾನ ಕಾರ್ಯದರ್ಶಿ ವೀರಭದ್ರ ಗಾಣಿಗ, ಪ್ರಜ್ವಲ್ ಉಪ್ಪುಂದ, ಸಂತೋಷ ಗೌಡ, ಆಲ್‌ಬೀನ್ ಜಡ್ಕಲ್, ಮಣಿಕಂಠ ದೇವಾಡಿಗ ಬೈಂದೂರು, ಭರತ್ ದೇವಾಡಿಗ, ಮಾಸ್ತಯ ಪೂಜಾರಿ, ಕಿರಣ್ ಗಾಣಿಗ, ದಿನೇಶ್ ನಾಯ್ಕ್, ಪ್ರಕಾಶ ಪೂಜಾರಿ, ರಮೇಶ್ ಹೇರೂರು, ವಿಜಯ ಪೂಜಾರಿ, ಮಾಣಿಕ್ಯ ಹೋಬಳಿದಾರ್, ಸುಲ್ತಾನ್ ಬೈಂದೂರು, ಶಬೀರ್ ಬೈಂದೂರು, ಲಕ್ಷ್ಮಣ ಮೊಗವೀರ ಕಿರಿಮಂಜೇಶ್ವರ, ಗಣೇಶ್ ನಾವುಂದ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ವರದಿ : ಎಚ್.ಸುಶಾಂತ್ ಬೈಂದೂರು

Related posts

Leave a Reply