Header Ads
Header Ads
Breaking News

ರಾಷ್ಟ್ರೀಯ ಯುವ ಸಪ್ತಾಹ ಯುವ ಪ್ರಶಸ್ತಿ – 4 ಮಂದಿ ಸಾಧಕರಿಗೆ ಅಭಿನಂದನೆ ಸವಣೂರು ಯುವಕ ಮಂಡಲದಿಂದ ಕಾರ್ಯಕ್ರಮ ಎಪ್ರಿಲ್ 3ರಿಂದ 6ರ ತನಕ ನಡೆಯಲಿರುವ ಸಪ್ತಾಹ

ಪುತ್ತೂರು: ಕಳೆದ 14 ವರ್ಷಗಳಿಂದ ನಡೆಯುತ್ತಿರುವ ಸವಣೂರು ಯುವಕ ಮಂಡಲದ ವತಿಯಿಂದ 7 ದಿನಗಳ ರಾಷ್ಟ್ರೀಯ ಯುವ ಸಪ್ತಾಹ ಎ.3 ರಿಂದ 9ರ ತನಕ ವಿವಿಧ ಕಡೆಗಳಲ್ಲಿ ಜರುಗಲಿದೆ. ಕೊನೆಯ ದಿನ ಸಮಾರೋಪ ಸಮಾರಂಭದಂದು ಯುವ ಮಂಡಲಿ ಪ್ರಶಸ್ತಿ, ಯುವ ಪ್ರಶಸ್ತಿ ಮತ್ತು ನಾಲ್ಕು ಮಂದಿ ಸಾಧಕರಿಗೆ ಅಭಿನಂದನೆ ಹಾಗೂ 6 ಮಂದಿಯನ್ನು ಗರುತಿಸುವಿಕೆಯ ಕಾರ್ಯಕ್ರಮ ನಡೆಯಲಿದೆ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ.ಸವಣೂರು ಹೇಳಿದ್ದಾರೆ. ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನಾ ಸಮಾರಂಭವು ಕುಟುಂಬ ಸಮ್ಮಿಲನದ ಮೂಲಕ ಮೆದು ಪದ್ಮಶ್ರೀ ನಿಲಯದಲ್ಲಿ ಉದ್ಘಾಟನೆಗೊಳ್ಳಲಿದೆ. ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಸವಣೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ ಸದಸ್ಯೆ ಪ್ರಮೀಳಾ ಜನಾರ್ದನ ಆಚಾರ್ಯ, ತಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ, ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಉದಯ ರೈ ಮಾದೋಡಿ, ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸವಣೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಆಶಯ ಮಾತನ್ನಾಡಲಿದ್ದಾರೆ. ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಜಿಲ್ಲಾ ಯು ಪ್ರಶಸ್ತಿ ಪುರಸ್ಕೃತ ಸಚಿನ್ ಎಸ್, ಏಕಪಾತ್ರಾಭಿನಯ ರಾಜ್ಯಮಟ್ಟದ ವಿಜೇತ ರಾಕೇಶ್ ರೈ ಕೆಡೆಂಜಿ ಮತ್ತಿತರರಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.