Header Ads
Header Ads
Header Ads
Breaking News

ರಾಷ್ಟ್ರೀಯ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್ ಮೊದಲ ದಿನ ರೈಲ್ವೇಸ್‌ಗೆ ಚಾಂಪಿಯನ್ ಪಟ್ಟ, ಕರ್ನಾಟಕಕ್ಕೆ ನಿರಾಸೆ

ರಾಜ್ಯ ಮತ್ತು ದ.ಕ ಜಿಲ್ಲಾ ವೇಯ್ಟ್‌ಲಿಫ್ಟಿಂಗ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ವಿದ್ಯಾಗಿರಿ ಕ್ಯಾಂಪಸ್‌ನ ನುಡಿಸಿರಿ ವೇದಿಕೆಯಲ್ಲಿ ನಡೆಯುತ್ತಿರುವ ಪುರುಷರ ವಿಭಾಗದ 70 ನೇ ಮತ್ತು ಮಹಿಳೆಯರ ವಿಭಾಗದ ೩೩ನೇ ರಾಷ್ಟ್ರೀಯ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೊದಲ ದಿನವಾಗಿರುವ ಭಾನುವಾರ ಪುರುಷರ ವಿಭಾಗದ 56 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ಕೊರಡ ರಾಮಣ್ಣ ಸ್ನ್ಯಾಚ್‌ನಲ್ಲಿ 108 ಮತ್ತು ಕ್ಲೀನ್& ಜರ್ಕ್‌ನಲ್ಲಿ 132 ಒಟ್ಟು 240 ಅಂಕಗಳೊಂದಿಗೆ ಮತ್ತು ಮಹಿಳೆಯರ ವಿಭಾಗದ 48 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 78 ಮತ್ತು ಕ್ಲೀನ್& ಜರ್ಕ್‌ನಲ್ಲಿ 100 ಒಟ್ಟು 178 ಅಂಕಗಳನ್ನು ಪಡೆದು ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ಸೇನಾ ಸ್ಪೋರ್ಟ್ಸ್ ಕ್ಲಬ್ ಬೋರ್ಡ್‌ನ ಎಂ.ಮನೋಜ್ ಕುಮಾರ್ ಸ್ನ್ಯಾಚ್‌ನಲ್ಲಿ 105, ಕ್ಲೀನ್& ಜರ್ಕ್‌ನಲ್ಲಿ 132ರೊಂದಿಗೆ ಒಟ್ಟು 237 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ತಮಿಳುನಾಡಿನ ಎಸ್ ರಾಮ್‌ಕುಮಾರ್ ಸ್ನ್ಯಾಚ್‌ನಲ್ಲಿ 105, ಕ್ಲೀನ್& ಜರ್ಕ್‌ನಲ್ಲಿ 131 ಒಟ್ಟು 236 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಒರಿಸ್ಸಾದ ಸುಶೀಲ ಮಜಿ ಸ್ನ್ಯಾಚ್‌ನಲ್ಲಿ 72 ಮತ್ತು ಕ್ಲೀನ್& ಜರ್ಕ್‌ನಲ್ಲಿ 90 ಒಟ್ಟು 162 ಅಂಕಗಳೊಂದಿಗೆ ದ್ವಿತೀಯ ಹಾಗೂ ಹರಿಯಾಣದ ಪೂನಮ್ ದಲಾಲ್ ಅವರು ಸ್ನ್ಯಾಚ್‌ನಲ್ಲಿ 71 ಮತ್ತು ಕ್ಲೀನ್& ಜರ್ಕ್‌ನಲ್ಲಿ 88 ಒಟ್ಟು 159 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

ಪುರುಷರ ವಿಭಾಗದ 56 ಕೆ.ಜಿ ವಿಭಾಗದಲ್ಲಿ ಕರ್ನಾಟಕದ ಸೆಲ್ವಂ ಅವರು ಸ್ಪರ್ಧಿಸಿದ್ದು 220 ಅಂಕಗಳನ್ನು ಪಡೆದು 7 ಸ್ಥಾನವನ್ನು ಪಡೆಯುವ ಮೂಲಕ ಮೊದಲ ದಿನ ನಿರಾಸೆ ಮೂಡಿಸಿದ್ದಾರೆ.

Related posts

Leave a Reply