Header Ads
Header Ads
Header Ads
Breaking News

ರಾಷ್ಟ್ರೀಯ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್ 2 ನೇ ದಿನವೂ ಪ್ರಾಬಲ್ಯ ಮೆರೆದ ರೈಲ್ವೇಸ್, ಮಂಜುನಾಥ್‌ರಿಂದ ಕರ್ನಾಟಕಕ್ಕೆ ಚಿನ್ನ

ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆಯುತ್ತಿರುವ ಪುರುಷರ ವಿಭಾಗದ 70 ನೇ ಮತ್ತು ಮಹಿಳೆಯರ ವಿಭಾಗದ 33 ನೇ ರಾಷ್ಟ್ರೀಯ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಎರಡನೇ ದಿನವೂ ರೈಲ್ವೇಸ್ ಪ್ರಾಬಲ್ಯ ಮೆರೆದಿದೆ. ಕರ್ನಾಟಕದ ಮಂಜುನಾಥ್ ಕ್ಲೀನ್ &ಜರ್ಕ್‌ನಲ್ಲಿ 160 ಅಂಕಗಳನ್ನು ಪಡೆಯುವ ಮೂಲಕ ಒಂದು ಚಿನ್ನ, ಸ್ನ್ಯಾಚ್‌ನಲ್ಲಿ ೧೨೪ ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕವನ್ನು ಗಳಿಸಿಕೊಟ್ಟಿದ್ದಾರೆ.

ಮಹಿಳೆಯರ ವಿಭಾಗದ 53 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ಎಂ.ಸಂತೋಷಿ ಅವರು ಸ್ನ್ಯಾಚ್‌ನಲ್ಲಿ 81, ಕ್ಲೀನ್& ಜರ್ಕ್‌ನಲ್ಲಿ 104 ಅಂಕಗಳೊಂದಿಗೆ ಒಟ್ಟು 185 ಅಂಕ, 58 ಕೆ.ಜಿ ವಿಭಾಗದಲ್ಲಿ ಶಿರೀಶಾ ಅವರು ಸ್ನ್ಯಾಚ್‌ನಲ್ಲಿ ೮೪, ಕ್ಲೀನ್& ಜರ್ಕ್‌ನಲ್ಲಿ 111 ಒಟ್ಟು 195 ಅಂಕಗಳೊಂದಿಗೆ, ಪುರುಷರ ವಿಭಾಗದ 62 ಕೆ.ಜಿ ವಿಭಾಗದಲ್ಲಿ ಸುಶಾಂತ್ ಸಾಹು ಅವರು ಸ್ನ್ಯಾಚ್‌ನಲ್ಲಿ 115 ಮತ್ತು ಕ್ಲೀನ್& ಜರ್ಕ್‌ನಲ್ಲಿ 144 ಒಟ್ಟು 259 ಅಂಕಗಳನ್ನು ಗಳಿಸಿ ಚಿನ್ನದ ಪದಕವನ್ನು ಪಡೆಯುವ ಮೂಲಕ ರೈಲ್ವೇಸ್‌ನ ಪ್ರಾಬಲ್ಯವನ್ನು ಹೆಚ್ಚಿಸಿದ್ದಾರೆ.

ಪುರುಷರ 69 ಕೆ.ಜಿ ವಿಭಾಗದಲ್ಲಿ ಸೇನಾ ಸ್ಪೋರ್ಟ್ಸ್ ಕ್ಲಬ್ ಬೋರ್ಡ್‌ನ ದೀಪಕ್ ಲಾಥರ್ ಅವರು ಸ್ನ್ಯಾಚ್‌ನಲ್ಲಿ 132 ಮತ್ತು ಕ್ಲೀನ್& ಜರ್ಕ್‌ನಲ್ಲಿ 156 ಒಟ್ಟು 288 ಅಂಕಗಳೊಂದಿಗೆ ಮೊದಲ ಚಿನ್ನದ ಪದಕವನ್ನು ಪಡೆದಿದೆ.

ಮಹಿಳೆಯರ ವಿಭಾಗದ 53 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ಸಂಜಿತ ಚಾನು ಸ್ನ್ಯಾಚ್‌ನಲ್ಲಿ 80, ಕ್ಲೀನ್& ಜರ್ಕ್‌ನಲ್ಲಿ 103 ಒಟ್ಟು 183 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು, ಮಣಿಪುರದ ಎಸ್.ಬಿಂದ್ಯಾರಾಣಿ ಅವರು ಸ್ನ್ಯಾಚ್‌ನಲ್ಲಿ 78, ಕ್ಲೀನ್&ಜರ್ಕ್‌ನಲ್ಲಿ 100 ಒಟ್ಟು 178 ಅಂಕಗಳೊಂದಿಗೆ ಕಂಚಿನ ಪದಕ ಗಳಿಸಿಕೊಂಡಿದ್ದಾರೆ. 58 ಕೆ.ಜಿ ವಿಭಾಗದಲ್ಲಿ ಪಂಜಾಬ್‌ನ ಹರ್ಷ್‌ದೀಪ್ ಕೌರ್ ಅವರು ಸ್ನ್ಯಾಚ್‌ನಲ್ಲಿ 85 , ಕ್ಲೀನ್ ಜರ್ಕ್‌ನಲ್ಲಿ 107 ಒಟ್ಟು 192 ಅಂಕಗಳೊಂದಿಗೆ ಬೆಳ್ಳಿ ಮತ್ತು ಹರಿಯಾಣದ ಹರ್ಜಿತ್ ಕೌರ್ ಅವರು ಸ್ನ್ಯಾಚ್‌ನಲ್ಲಿ 83, ಕ್ಲೀನ್ ಜರ್ಕ್‌ನಲ್ಲಿ 105 ಒಟ್ಟು 188 ಅಂಕಗಳನ್ನು ಗಳಿಸಿ ಕಂಚಿನ ಪದಕವನ್ನು ಪಡೆದಿದ್ದಾರೆ.

ಪುರುಷರ 62 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ಎಂ.ರಾಜಾ ಸ್ನ್ಯಾಚ್‌ನಲ್ಲಿ 112, ಕ್ಲೀನ್ &ಜರ್ಕ್‌ನಲ್ಲಿ 146 ಒಟ್ಟು 258 ಅಂಕಗಳೊಂದಿಗೆ ಬೆಳ್ಳಿ, ಉತ್ತರಾಖಂಡ್‌ನ ಗುಲಾಮ್ ನವಿ ಸ್ನ್ಯಾಚ್‌ನಲ್ಲಿ 111, ಕ್ಲೀನ್ &ಜರ್ಕ್‌ನಲ್ಲಿ 146 ಒಟ್ಟು 257 ಅಂಕಗಳೊಂದಿಗೆ ಕಂಚಿನ ಪದಕವನ್ನು ಗಳಿಸಿಕೊಂಡಿದ್ದಾರೆ.

ಪುರುಷರ 69 ಕೆ.ಜಿ ವಿಭಾಗದಲ್ಲಿ ವೆಸ್ಟ್ ಬೆಂಗಾಲ್‌ನ ಅಚಿಂತಾ ಶಿವುಳಿ ಸ್ನ್ಯಾಚ್‌ನಲ್ಲಿ 153, ಕ್ಲೀನ್ &ಜರ್ಕ್‌ನಲ್ಲಿ 153 ಒಟ್ಟು 286 ಅಂಕಗಳೊಂದಿಗೆ ಬೆಳ್ಳಿ,

ಪುರುಷರ ವಿಭಾಗದ 63 ಕೆ.ಜಿ ವಿಭಾಗದಲ್ಲಿ ಭರವಸೆಯನ್ನು ಮೂಡಿಸಬೇಕಾಗಿದ್ದ ಕರ್ನಾಟಕದ ನವೀನ್‌ಚಂದ್ರ ಅವರು ಸ್ನ್ಯಾಚ್ ವಿಭಾಗದಲ್ಲಿ ಅನರ್ಹಗೊಂಡು ನಿರಾಸೆ ಮೂಡಿಸಿದರು.

ರಾಜ್ಯ ಮತ್ತು ದ.ಕ ಜಿಲ್ಲಾ ವೇಯ್ಟ್‌ಲಿಫ್ಟಿಂಗ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಈ ವೇಯ್ಟ್ ಲಿಪ್ಟಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದೆ.

ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Related posts

Leave a Reply