Header Ads
Header Ads
Header Ads
Breaking News

ರಾಷ್ಟ್ರೀಯ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್ ಕರ್ಣಮಲ್ಲೇಶ್ವರಿಯ ದಾಖಲೆ ಮುರಿದ ರೈಲ್ವೇಸ್‌ನ ರಾಖಿ ಹಲ್ದೇರ್ ಕರ್ನಾಟಕದ ತಸನಾಗೆ ಬೆಳ್ಳಿ

ಮೂಡುಬಿದಿರೆ : ದ.ಕ ಜಿಲ್ಲೆಯ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ವೇಯ್ಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದ ೬೩ ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ರಾಖಿ ಹಲ್ದೇರ್ ಕರ್ಣಂ ಮಲ್ಲೇಶ್ವರಿ ಅವರ ದಾಖಲೆಯನ್ನು 1 ಅಂಕದಿಂದ ಅಳಿಸಿ ಹಾಕಿದ್ದಾರೆ.
ಇದೇ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಬೆಂಗಳೂರಿನ ಸಾಯಿ ಸ್ಪೋರ್ಟ್ಸ್ ಅಥೋರೆಟಿ ಆಫ್ ಇಂಡಿಯಾ ಸೌತ್ ಸೆಂಟರ್‌ನ ಕ್ರೀಡಾಪಟು ತಸನಾ ಚಾನು ಸ್ನ್ಯಾಚ್‌ನಲ್ಲಿ 85 ಮತ್ತು ಕ್ಲೀನ್ &ಜರ್ಕ್‌ನಲ್ಲಿ 116 ಒಟ್ಟು 202 ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆಲ್ ಇಂಡಿಯಾ ಪೊಲೀಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಅಮನ್‌ದೀಪ್ ಕೌರ್ ಅವರು ಸ್ನ್ಯಾಚ್ ನಲ್ಲಿ 85, ಕ್ಲೀನ್&ಜರ್ಕ್‌ನಲ್ಲಿ 106 ಒಟ್ಟು 191 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

69 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ನ ಪೂನಮ್ ಯಾದವ್ ಅವರು ಸ್ನ್ಯಾಚ್‌ನಲ್ಲಿ 96, ಕ್ಲೀನ್ &ಜರ್ಕ್‌ನಲ್ಲಿ 118 ಒಟ್ಟು 214 ಅಂಕಗಳನ್ನು ಗಳಿಸುವ ಚಿನ್ನದ ಪದಕ, ಪಂಜಾಬ್‌ನ ಸರಬ್‌ಜಿತ್ ಕೌರ್ ಸ್ನ್ಯಾಚ್‌ನಲ್ಲಿ 86, ಕ್ಲೀನ್& ಜರ್ಕ್‌ನಲ್ಲಿ 116 ಒಟ್ಟು 205 ಅಂಕಗಳೊಂದಿಗೆ ಬೆಳ್ಳಿ ಮತ್ತು ಆಂಧ್ರ ಪ್ರದೇಶದ ಎಸ್.ಕೆ.ಆಲಿಮಾ ಬೇಗಮ್ ಅವರು ಸ್ನ್ಯಾಚ್‌ನಲ್ಲಿ 88, ಕ್ಲೀನ್ & ಜರ್ಕ್‌ನಲ್ಲಿ 113 ಒಟ್ಟು 201 ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಯನ್ನು ಪಡೆದರು.

ಪುರುಷರ 77 ಕೆ.ಜಿ ವಿಭಾಗದಲ್ಲಿ ಸರ್ವಿಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಅಜೇಯ್ ಸಿಂಗ್ ಅವರು ಸ್ನ್ಯಾಚ್‌ನಲ್ಲಿ 144, ಕ್ಲೀನ್ &ಜರ್ಕ್‌ನಲ್ಲಿ 182 ಒಟ್ಟು 326 ಅಂಕಗಳನ್ನು ಪಡೆಯುವ ಮೂಲಕ ಚಿನ್ನ, ರೈಲ್ವೇಸ್‌ನ ಎಸ್.ಸತೀಶ್ ಕುಮಾರ್ ಅವರು ಸ್ನ್ಯಾಚ್‌ನಲ್ಲಿ 143, ಕ್ಲೀನ್ &ಜರ್ಕ್‌ನಲ್ಲಿ 173 ಒಟ್ಟು 316 ಹಾಗೂ ಅಸ್ಸಾಂನ ಪಪುಲ್ ಚಂಗ್‌ಮಾಯಿ ಅವರು ಸ್ನ್ಯಾಚ್‌ನಲ್ಲಿ 316, ಕ್ಲೀನ್ &ಜರ್ಕ್‌ನಲ್ಲಿ 167 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕವನ್ನು ಪಡೆದುಕೊಂಡರು.

ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply