Header Ads
Header Ads
Breaking News

ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಪಟಿಯಾಲ, ಎರಡನೇ ದಿನ ಕರ್ನಾಟಕದವರಿಗೆ ಐದು ಪದಕ

ಕರ್ನಾಟಕದ ಎಸ್. ಶಮ್ಶೀರ್ ಪಟಿಯಾಲ ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ನಲ್ಲಿ ಶುಕ್ರವಾರ ಬೆಳ್ಳಿ ಸಾಧನೆ ಮಾಡಿದ್ದಾರೆ.
ಕರ್ನಾಟಕದ ಮೋಹನ್ ನಾಯಕ್, ಜಿಕೆ ವಿಜಯಕುಮಾರಿ, ಎಚ್‌ಎಮ್ ಜ್ಯೋತಿ ಹಾಗೂ ವಿಶ್ವಂಬರ್ ಕೋಲೆಕಾರ್ ಕಂಚಿಗೆ ಕೊರಳೊಡ್ಡಿದರು.
ಈ ಮೂಲಕ ಟೂರ್ನಿಯ ಎರಡನೇ ದಿನ ರಾಜ್ಯದ ಅಥ್ಲೀಟ್ಗಳು ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳು ಸೇರಿವೆ.
ಪುರುಷರ ಲಾಂಗ್ ಜಂಪ್ ವಿಭಾಗದಲ್ಲಿ ಎಸ್. ಶಮ್ಶೀರ್ ೭.೬೭ ಮೀಟರ್ ಜಿಗಿಯುವ ಮೂಲಕ ಎರಡನೇಯ ಸ್ಥಾನ ಪಡೆದರು. ಈ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಮಧ್ಯಪ್ರದೇಶದ ಅಂಕಿತ್ ಶರ್ಮಾ ೭.೮೦ಮೀ ಚಿನ್ನ ಕೊರಳಿಗೇರಿಸಿಕೊಂಡರು. ರಾಜ್ಯದ ಮೋಹನ್ ೭.೬೬ ಮೀಟರ್ ಜಿಗಿದು ಕಂಚು ಜಯಿಸಿದರು. ಮಹಿಳೆಯರ ೮೦೦ಮೀಟರ್ ಓಟ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಟಿಂಟೂ ಲೂಕಾ ಟ್ರ್ಯಾಕ್ನಲ್ಲಿ ಮುಗ್ಗರಿಸಿ ಬಿದ್ದರು. ಈ ಕಾರಣ ಮಹಾರಾಷ್ಟ್ರದ ಅರ್ಚನಾ ಅಧವ್ಗೆ ಕಾಲ: ೨;೦೫.೬೬ ಚಿನ್ನ ಗೆಲ್ಲುವ ಅದೃಷ್ಟ ಒಲಿಯಿತು. ಇದೇ ವಿಭಾಗದಲ್ಲಿ ರಾಜ್ಯದ ಜಿಕೆ ವಿಜಯಕುಮಾರಿ ಕಂಚಿನ ಪದಕ ಗೆದ್ದರು. ಬೆಳ್ಳಿ ಬಂಗಾಳದ ಲಿಲಿ ದಾಸ್ ಅವರ ಪಾಲಾಯಿತು.
ಮಹಿಳೆಯರ ೨೦೦ಮೀ ಓಟ ವಿಭಾಗದಲ್ಲಿ ಕರ್ನಾಟಕದ ಎಚ್‌ಎಮ್ ಜ್ಯೋತಿ ೨೪.೩೭ ಸೆಕೆಂಡುಗಳಲ್ಲಿ ಗುರಿ ಸೇರುವ ಮೂಲಕ ಕಂಚಿಗೆ ಕೊರಳೊಡ್ಡಿದರು. ಈ ವಿಭಾಗದಲ್ಲಿ ಒಡಿಶಾದ ಶ್ರಬನಿ ನಂದ ಚಿನ್ನ ಗೆದ್ದರೆ, ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ದ್ಯುತಿ ಚಾಂದ್ ಬೆಳ್ಳಿಗೆ ತೃಪ್ತಿಪಟ್ಟರು. ಪುರುಷರ ೮೦೦ಮೀ ವಿಭಾಗದಲ್ಲಿ ರಾಜ್ಯದ ವಿಶ್ವಂಬರ್ ಕೋಲೆಕಾರ್ ಕಂಚು ಜಯಿಸಿದರು. ಈ ವಿಭಾಗದಲ್ಲಿ ದೆಹಲಿಯ ಅಮೋಜ್ ಜಾಕೋಬ್ ಚಿನ್ನ ಗೆದ್ದರು. ಆದರೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಕೇರಳದ ಜಿನ್ಸನ್ ಜಾನ್ಸನ್ ಬೆಳ್ಳಿಗೆ ತೃಪ್ತಿಪಟ್ಟರು.
ನೀರಜ್ ಚೋಪ್ರಾ ಪುರಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಜೂನಿಯರ್ ವಿಭಾಗ ದಲ್ಲಿ ವಿಶ್ವ ದಾಖಲೆ ಹೊಂದಿರುವ ಚೋಪ್ರಾ ೮೫.೬೩ಮೀಟರ್ ಜಾವೆಲಿನ್ ಎಸೆಯುವ ಮೂಲಕ ಚಿನ್ನಕ್ಕೆ ಕೊರ ಳೊಡ್ಡಿದರು.

Related posts

Leave a Reply