Header Ads
Header Ads
Breaking News

ರಾಷ್ಟ್ರೀಯ ಸೌಹಾರ್ದ ಕಾರ್ಯಕ್ರಮ ರಕ್ಷಾಬಂದನ ಸುಳ್ಯ ಸೇವಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸುಳ್ಯ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮೀನಾಕ್ಷಿ ಗೌಡ ಅವರು ಮಾತನಾಡಿ, ಬ್ರಹ್ಮಕುಮಾರಿಯವರು ಜನರನ್ನು ಸೌಹಾರ್ದಯುತವಾಗಿ ಒಂದು ಮಾಡುವ ಕಾರ್ಯದಲ್ಲಿ ತುಂಬಾ ನಿಪುಣರಾಗಿದ್ದಾರೆ. ಈ ಕಾರ್ಯದಿಂದ ಸಮಾಜದಲ್ಲಿ ಶಾಂತ ನೆಲೆಸಲಿ ಎಂದು ಹಾರೈಸಿದರು.ಆನಂತರ ಮಾತನಾಡಿದ ರಾಜ್ಯ ಭ್ರಷ್ಟಾಚಾರದ ನಿಗ್ರಹ ದಳ ಹಾಗೂ ಅಪರಾಧ ಪತ್ತೆದಳದ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರುವಂಜ ಅವರು ಮಾತನಾಡಿ, ಬ್ರಹ್ಮಕುಮಾರಿಯವರು ಉನ್ನತ ಆದ್ಯಾತ್ಮಿಕ ಜ್ಞಾನವನ್ನು ತಿಳಿಸುತ್ತಾರೆ. ಇದರ ಪ್ರಯೋಜವನ್ನು ಎಲ್ಲಾ ಗ್ರಾಮಗಳಿಗೆ ತಲುಪಿಸುವ ಸೇವೆಯನ್ನು ಮಾಡೋಣ ಎಂದರು.ಈ ಸಂದರ್ಭ ಮಹಮ್ಮದ್ ಮುಬಿನ್, ಬ್ರಹ್ಮಕುಮಾರಿ ಮಂಗಳೂರು ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ವಿಶ್ವೇಶ್ವರಿ, ಬಿ.ಕೆ. ಶೋಭಾ, ಬ್ರಹ್ಮಕುಮಾರೀಸ್ ಸುಳ್ಯ ಸೇವಾ ಕೇಂದ್ರ ಬಿ.ಕೆ. ಉಮಾದೇವಿ, ಬಿ.ಕೆ. ಉಮೇಶ್ ಆಚಾರ್ಯ, ಎಂಜಿನಿಯರ್ ಸುಮಿತ್ರ ಮತ್ತಿತರರು ಉಪಸ್ಥಿತರದಿದರು.

Related posts

Leave a Reply