Header Ads
Header Ads
Breaking News

ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯಗಳ ರಾಶಿ : ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸ್ಥಳೀಯರು

ಮಂಜೇಶ್ವರ: ಮಂಜೇಶ್ವರ ರೈಲ್ವೆ ನಿಲ್ದಾಣಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ ಪಕ್ಕವಾದ ರಾಗಂ ಜಂಕ್ಷನಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತ್ಯಾಜ್ಯಗಳ ರಾಶಿಯಿದ್ದು, ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸದೆ ಇರುವುದು ಸ್ಥಳೀಯರಲ್ಲಿ ಆತಂಕವನ್ನು ಹುಟ್ಟಿಸಿದೆ. ಈಗಾಗಲೇ ಈ ಪರಿಸರಗಳಲ್ಲಿ ಹಲವು ರೀತಿಯ ಜ್ವರಗಳು ಕಂಡು ಬಂದಿದ್ದು ಮಾತ್ರವಲ್ಲದೆ ಹಲವಾರು ಮಂದಿ ವಾಂತಿ ಬೇಧಿಯಾಗಿ ಕೂಡಾ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ತ್ಯಾಜ್ಯಗಳ ಕುಂಬಾರವೇ ಇದ್ದು ಇದನ್ನು ಪಂ. ಅಧಿಕೃತರು ಒಮ್ಮೆ ವಿಲೇವಾರಿಗೊಳಿಸಿದರೆ ಮತ್ತೆ ಅದೇ ಸ್ಥಳದಲ್ಲಿ ಎರಡು ದಿನಗಳಲ್ಲಿ ಮತ್ತೆ ತ್ಯಾಜ್ಯವನ್ನು ತಂದು ಹಾಕುತ್ತಿರುವುದು ಮಾಮೂಲಿಯಾಗಿದೆ. ಸತ್ತ ನಾಯಿಯನ್ನು ಕೂಡಾ ರಸ್ತೆ ಬದಿಯ ತ್ಯಾಜ್ಯಗಳ ಕುಂಬಾರಕ್ಕೆ ಬಿಸಾಡುತಿದ್ದಾರೆ . ರಾತ್ರಿ ಹಾಗು ಮುಂಜಾನೆ ವೇಳೆಗಳಲ್ಲಾಗಿ ಬೈಕ್ ಹಾಗು ಕಾರುಗಳಲ್ಲಾಗಿ ತ್ಯಾಜ್ಯಗಳನ್ನು ಬಿಸಾಡುತಿದ್ದಾರೆ . ಜಿಲ್ಲಾ ಆಡಳಿತ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶವನ್ನು ಹೊರಡಿಸಿದ್ದರೂ ಈ ತನಕ ಮಂಜೇಶ್ವರ ಪರಿಸರಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಯಾವುದೇ ಕ್ರಮ ಉಂಟಾಗಿಲ್ಲ. .ತಿಂಗಳಿಗೆ ಮುಂಚಿತವಾಗಿ ಪೊಸೋಟು ಹೊಳೆಗೆ ಓಮ್ನಿ ವ್ಯಾನಿನಲ್ಲಿ ತಂದು ಹಾಡು ಹಗಲೇ ತ್ಯಾಜ್ಯವನ್ನು ಬಿಸಾಡುತಿದ್ದ ವೇಳೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಉಂಟಾಗಿಲ್ಲವೆಂಬುದಾಗಿ ಊರವರು ಹೇಳುತ್ತಿದ್ದಾರೆ . ಮಂಜೇಶ್ವರ ರಾಗಂ ಮೈಜಂಕ್ಷನಿನಲ್ಲಿ ಶೇಖರಣೆಯಾಗಿರುವ ತ್ಯಾಜ್ಯಗಳ ದುರ್ನಾತದಿಂದ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಾರಿಯಾಗಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕಾರು , ವ್ಯಾಪಾರಿಗಳು ಸೇರಿದಂತೆ ಹಲವಾರು ಮಂದಿ ದಿನನಿತ್ಯ ನೂರಾರು ಮಂದಿ ನಡೆದಾಡುತಿದ್ದಾರೆ. ಇವರೆಲ್ಲರೂ ಸಾಂಕ್ರಾಮಿಕ ರೋಗದ ಭಿಯನ್ನು ಎದುರಿಸುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನ ಸ್ಥಳೀಯರು ಆಗ್ರಹಿಸಿದ್ದಾರೆ

Related posts

Leave a Reply