Header Ads
Header Ads
Breaking News

“ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ”,ಪಾದಯಾತ್ರೆ ಯಶಸ್ವಿ :ರಮಾನಾಥ ರೈ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ “ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ” ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. 

ಇವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಸ್ಥಳೀಯ ಸಂಸದರು ಹೆದ್ದಾರಿ ಕಾಮಗಾರಿ ರಾಜ್ಯ ಸರ್ಕಾರದ ಕೆಲಸ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ನಮಗೆ ಕೊಬ್ಬು ಬಂದಿಲ್ಲ ಅಧಿಕಾರದಲ್ಲಿ ಇದ್ದವರಿಗೆ ವಿಮಾನದಲ್ಲಿ ಮತ್ತು ಸರ್ಕಾರಿ ವಾಹನದಲ್ಲಿ ತಿರುಗಾಡಿ ಕಬ್ಬು ಬರುತ್ತದೆವಿಜಯಬ್ಯಾಂಕ್ ವಿಲೀನ ವಿಚಾರದಲ್ಲಿ ವೀರಪ್ಪ ಮೊಯ್ಲಿಯವರಿಗೆ ಬೆರಳು ತೊರಿಸುವುದು ಖಂಡನೀಯ.

ವೀರಪ್ಪ ಮೊಯ್ಲಿಯಲ್ಲಿ ಸಂಸದರು ಕ್ಷಮೆ ಕೇಳಬೇಕು. ಮತ್ತು ಪಾದಯಾತ್ರೆ ಯಲ್ಲಿ ಭಾಗವಹಿಸಿದ ನಮ್ಮ ಪಕ್ಷದ ಕಾರ್ಯಕರ್ತ ರಿಗೆ ನನ್ನ ಧನ್ಯವಾದಗಳು.
ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಕೊಡಿಜಾಲ್ ಇಬ್ರಾಹಿಂ,ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿದರ್ ಹೆಗ್ಡೆ,ಕಾರ್ಪೊರೇಟ್ ನವೀನ್ ಡಿಸೋಜಾ,ಮಾಜಿ ಮೇಯರ್ ಕವಿತಾ ಸನಿಲ್ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು

Related posts

Leave a Reply