Header Ads
Breaking News

ರಾಷ್ಟ್ರೀಯ ಹೆದ್ದಾರಿ 66ಗೆ ಎಂಸಿಎಫ್ ಬಳಿ ಸ್ಪೀಡ್‌ಬ್ರೇಕರ್ ಅಳವಡಿಕೆ: ಸವಾರರ ಆಕ್ರೋಶ

ರಾಷ್ಟ್ರೀಯ ಹೆದ್ದಾರಿ 66ರ ಎಂಸಿಎಫ್ ಬಳಿ ಹೆದ್ದಾರಿಗೆ ಸ್ಪೀಡ್ ಬ್ರೇಕರ್ ಹಂಪ್ ಅಳವಡಿಸಲಾಗಿದ್ದು, ಈ ವಿಚಾರ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಎಂಸಿಎಫ್ ಬಳಿಯ ರೈಲ್ವೇ ಗೇಟ್ ಸಮೀಪ ಈ ಹಂಪ್‌ನ್ನು ಆಳವಡಿಸಲಾಗಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯನ್ನೊಡ್ಡುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ಏಕಾಏಕಿ ರಾತ್ರೋರಾತ್ರಿ ಈ ರೀತಿ ಹಂಪ್‌ಗಳನ್ನು ಅಳವಡಿಕೆ ಮಾಡುತ್ತಾರೆ. ಈ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನಾಗಲೀ ಅಥವಾ ಬಿಳಿ ಬಣ್ಣವನ್ನಾಗಲೀ ಬಳಿದಿಲ್ಲ. ಇದು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರ ಜೊತೆಗೆ ಹೆದ್ದಾರಿ ಅಧಿಕಾರಿಗಳು ಆಡುತ್ತಿರುವ ಚೆಲ್ಲಾಟ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Related posts

Leave a Reply

Your email address will not be published. Required fields are marked *