Header Ads
Header Ads
Breaking News

ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಡೈವರ್ಶನ್‌ಗೆ ಮತ್ತೊಂದು ಬಲಿ ಎರ್ಮಾಳು ನೇರಳ್ತಾಯ ಗುಡಿ ಸಮೀಪ ಬೆಂಗಳೂರಿನ ಯುವಕ ದಾರುಣ ಸಾವು

ಪಡುಬಿದ್ರಿ: ತೆಂಕ ಎರ್ಮಾಳಿನ ನೇರಳ್ತಾಯ ಗುಡಿ ಸಮೀಪದ ಅವೈಜ್ಞಾನಿಕ ಡೈವರ್ಶನ್ ಗಮನಕ್ಕೆ ಬಾರದೆ ಬೆಂಗಳೂರು ಮೂಲದ ಯುವಕ ಬೈಕನ್ನು ನೇರವಾಗಿ ಚಲಾಯಿಸಿ ಹೊಂಡಕ್ಕೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದಾರುಣಾವಾಗಿ ಮೃತಪಟ್ಟಿದ್ದಾನೆ.

ಮೃತ ಯುವಕ ಬೆಂಗಳೂರಿನ ಬಂಗಲಗುಂಟೆಯ ಮಂಗಳಗೌರಿ ನಿವಾಸದ ವಾಸಿ ಹನುಮಂತಪ್ಪ ಗಡ್ಡಿ ಪುತ್ರ ಸುಜಯ್ ಗಡ್ಡಿ(24). ಈತ ಮಣಿಪಾಲದ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರ ಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ತಡರಾತ್ರಿ ನಡೆದ ಈ ಅಪಘಾತವನ್ನು ಹೆದ್ದಾರಿ ಸಂಚಾರಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಅಪಘಾತ ಅದೇಷ್ಟು ಹೊತ್ತಿನ ಹಿಂದೆ ನಡೆದಿರ ಬಹುದೆಂಬ ಮಾಹಿತಿ ಇಲ್ಲ, ಮುಖಕ್ಕೆ ಗಂಭೀರ ಏಟು ತಗುಲಿದ್ದು ಅಪಘಾತದ ಸಂದರ್ಭದಲ್ಲೇ ಇದನ್ನು ಗಮನಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದರೆ ಯುವಕನನ್ನು ಬದಕಿಸ ಬಹುದಿದ್ದು ಎಂಬುದು ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರ ಅಭಿಪ್ರಾಯ.ಡೈವರ್ಶನ್ ಇರುವ ಬಗ್ಗೆ ಪೂರಕ ಮಾಹಿತಿ ನೀಡುವ ಯಾವುದೇ ನಾಮಫಲಕವಾಗಲೀ… ಡೈವರ್ಶನ್ ಪ್ರದೇಶದಲ್ಲಿ ಮಿಂಚುವ ಸಿಕ್ಕರಾಗಲೀ ಇಲ್ಲದಿರುವುದು ಮಾತ್ರವಲ್ಲ ಎಲ್ ಮಾದರಿಯಲ್ಲಿ ಈ ಡೈವರ್ಶನ್ ಇರುವುದರಿಂದ ಪಕ್ಕನೇ ಇದು ಗಮನಕ್ಕೆ ಬಾರದೆ ಅಪಘಾತ ಸಂಭವಿಸುವುದು ಖಚಿತ ಎಂಬಂತ್ತಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಕಂಪನಿ ನವಯುಗ್ ನಿರ್ಲಕ್ಷ್ಯಕ್ಕೆ ಅದೇಷ್ಟೋ ಅಮಾಯಕರ ಪ್ರಾಣಗಳು ಹೆದ್ದಾರಿಗೆ ಬಲಿಯಾಗಿದ್ದು ಈ ಬಗ್ಗೆ ಪರಿಶೀಲಿಸಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ.

ವರದಿ-ಸುರೇಶ್ ಎರ್ಮಾಳ್