Header Ads
Header Ads
Header Ads
Header Ads
Header Ads
Header Ads
Breaking News

ರಾಷ್ಟ್ರೀಯ ಹೆದ್ದಾರಿ 66ರ ಕುಳಾಯಿ ಬಳಿ ಕಾಂಕ್ರೀಟಿಕರಣ ಕಾಮಗಾರಿ ಆರಂಭ : ಶಾಸಕ ಡಾ.ಭರತ್ ಶೆಟ್ಟಿ ಅವರಿಂದ ಪರಿಶೀಲನೆ

ರಾಷ್ಟ್ರೀಯ ಹೆದ್ದಾರಿ 66ರ ಕುಳಾಯಿ ಬಳಿ ಹೆದ್ದಾರಿ ಜಂಕ್ಷನ್‍ಗೆ ಕಾಂಕ್ರಿಟೀಕರಣ ಮಾಡುವ ಕಾಮಗಾರಿ ಆರಂಭವಾಗಿದೆ. ಶಾಸಕ ಡಾ.ಭರತ್ ಶೆಟ್ಟಿ ಅವರು ಆಗಮಿಸಿ ಪರಿಶೀಲನೆ ನಡೆಸಿದರು. ಕುಳಾಯಿ ಜಂಕ್ಷನ್ ನಲ್ಲಿ ಮಳೆ ನೀರು ನಿಂತು ರಸ್ತೆ ಸಂಪೂರ್ಣ ಹದೆಗೆಡುತ್ತಿತ್ತು. ಸರಿಯಾದ ಒಳಚರಂಡಿಯನ್ನು ಹೆದ್ದಾರಿ ಇಲಾಖೆ ಮಾಡದ ಕಾರಣ ಈ ಕೃತಕ ನೆರೆಯಿಂದ ರಸ್ತೆ ಡಾಮರು ಎದ್ದು ಹೋಗಿ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿತ್ತು. ಇದನ್ನು ಮನಗಂಡು ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅವರು ಹೆದ್ದಾರಿ 66ರ ಪ್ರಮುಖ ಜಂಕ್ಷನ್ ಗಳಾದ ಕುಳಾಯಿ,ಬೈಕಂಪಾಡಿ ಕೈಗಾರಿಕಾ ಪ್ರದೇಶದ ತಿರುವು ರಸ್ತೆ,ಪಣಂಬೂರು ಬೀಚ್ ತಿರುವು ಜಂಕ್ಷನ್,ಕೂಳೂರು ಬ್ರಿಡ್ಜ್ ಅಯ್ಯಪ್ಪ ಗುಡಿ ಬಳಿ ಕಾಂಕ್ರಟೀಕರಣ ಮಾಡಲು ಒತ್ತಾಯಿಸಿದ್ದರು. ಇದೀಗ ಸಭೆಯಲ್ಲಿ ಶಾಸಕರ ಒತ್ತಾಯದಂತೆ ಇಲಾಖೆ ಕಾಮಗಾರಿ ಆರಂಭಿಸಿದೆ.

ಕುಳಾಯಿ ಬಳಿ ಕಾಮಗಾರಿ ವೀಕ್ಷಣೆ ನಡೆಸಿದ ಶಾಸಕರು ಹೆದ್ದಾರಿ ನಿರ್ವಹಣೆ ದಾರರಿಗೆ ಗುಣಮಟ್ಟದ ಕಾಮಗಾರಿ ನಡೆಸಿ ಸಮರ್ಪಕ ಒಳಚರಂಡಿ ಮಾಡಿಕೊಡುವಂತೆ ಸೂಚಿಸಿದರು. ಇದೇ ಸಂದರ್ಭ ಶಾಸಕರ ವಿಶೇಷ ಅನುದಾನ ದಲ್ಲಿ ಹೊನ್ನಕಟ್ಟೆಯಿಂದ ಕಾನಾ ಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಕಾಂಕ್ರಿಟ್ ರಸ್ತೆ ಅಗಲೀಕರಣ ಹಾಗೂ ಚರಂಡಿ ಮತ್ತಿತರ ಕಾಮಗಾರಿ ಕೈಗೊಳ್ಳುವ ಬಗ್ಗೆ ಸ್ಥಳೀಯರಲ್ಲಿ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಶಾಂತಾ ರವೀಂದ್ರ,ವಿಠಲ ಸಾಲಿಯಾನ್,ರಮೇಶ್ ಅಳಪೆ,ವರುಣ್ ಚೌಟ, ಜಯರಾಮ ಆಚಾರ್ಯ, ಕಿರಣ್ ಕುಮಾರ್ ಕೋಡಿಕಲ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *