Header Ads
Header Ads
Header Ads
Breaking News

ರಾಷ್ಟ್ರೀಯ ಹೆದ್ದಾರಿ(169)ರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಭೂಮಾಲಿಕರ ಕೋರಿಕೆಯನ್ನು ಇಲಾಖೆ ಪರಿಗಣಿಸಬೇಕು : ಮರಿಯಮ್ಮ ಥೋಮಸ್ ಹೇಳಿಕೆ

ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು-ಮೂಡುಬಿದರೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಭೂಮಾಲಿಕರ ಕೋರಿಕೆಯನ್ನು ಇಲಾಖೆ ಪರಿಗಣಿಸಬೇಕು. ಪರಿಗಣಿಸದಿದ್ದಲ್ಲಿ ಜಮೀನನ್ನು ಬಿಟ್ಟುಕೊಡಲಾಗುವುದಿಲ್ಲ. ಜಮೀನಿನ ಸರಿಯಾದ ವಿವರವುಳ್ಳ ಸೆರ್ವ ನಂಬರ್ ನಮೋದಿಸಿ ಪ್ರಾರಂಭಿಕ ಅಧಿಸೂಚನೆಯನ್ನು ಪುನರ್ ಪ್ರಕಟಿಸುವಂತೆ ಭೂಮಾಕರ ಹೋರಾಟ ಸಮಿತಿಯ ಅಧ್ಯಕ್ಷರಾದ ಮರಿಯಮ್ಮ ಥೋಮಸ್ ಆಗ್ರಹಿಸಿದರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ (169) ಮಂಗಳೂರು-ಮೂಡುಬಿದರೆ ರಸ್ತೆ ಅಗಲೀಕರಣ ಪ್ರಾರಂಭಿಕ ಅಧಿಸೂಚನೆಯನ್ನ ರಾಷ್ಟ್ರೀಯ ಗೆಜೆಟ್‍ನಲ್ಲಿ ಪ್ರಚಾರ ಪಡಿಸಲಾಗುತ್ತಿತ್ತು. 8 ತಿಂಗಳುಗಳ ಬಳಿಕ ವಿಶೇಷ ಭೂ ಸ್ವಾಧೀನ ಅಧಿಕಾರಿಯವರು ವಿಚಾರಣೆ ನಡೆಸಿ ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಳ್ಳದೆ ತಾರತುರಿಯಲ್ಲಿ ಕಲಂ 3ಡಿ ಕರಡು ಅಂತಿಮ ಅಧಿಸೂಚನೆಯನ್ನು ತಯಾರಿಸಿ ಅನುಮೋದನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಒಂದು ವರ್ಷದೊಳಗೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಬೇಕಾಗಿದೆ. ಒಂದು ವರ್ಷವಾದರೂ ಅಧಿಸೂಚನೆಯನ್ನು ಹೊರಡಿಸಿಲ್ಲ. ಹಾಗಾಗಿ ಪ್ರಾರಂಭಿಕ ಅಧಿಸೂಚನೆಯನ್ನು ಪುನರ್ ಪ್ರಕಟಿಸುವಂತೆ ಆಗ್ರಹಿಸಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಕಾಶ್ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *