Header Ads
Header Ads
Breaking News

ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆ:750ಕ್ಕೂ ಹೆಚ್ಚು ಛಾಯಾಚಿತ್ರಗಾರರು ಭಾಗಿ

ಆಳ್ವಾಸ್ ಛಾಯಾಚಿತ್ರಸಿರಿ 2018 ರ ಅಂಗವಾಗಿ ಫೆಡರೇಶನ್ ಆಫ್ ಇಂಡಿಯನ್ ಟೋಗ್ರಫಿ ಅವರ ಮಾರ್ಗದರ್ಶನದಲ್ಲಿ ಜರಗಿದ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 750 ಕ್ಕೂ ಅಧಿಕ ಛಾಯಾಚಿತಗಾರರು `ಭಾಗವಹಿಸಿ 4500 ದಾಖಲೆಯ ಚಿತಗಳನ್ನು ಕಳುಹಿಸಿದ್ದಾರೆ. ಈ ಸ್ಪಧೆರ್ಯ ತೀರ್ಪುಗಾರಿಕೆ ಮುಕ್ತಾಯವಾಗಿದ್ದು ವಿಜೇತರ ಪಟ್ಟಿಯನ್ನು ಮುಂದೆ ಕೊಡಲಾಗಿದೆ.ಕಲರಫುಲ್ಲ್ ಇಂಡಿಯಾ, ರೂರಲ್ ಲೈಫ್, ವೈಲ್ಡ್ ಲೈಫ್ ಹಾಗೂ ಮೊನೋಕ್ರೋಮ್ ವಿಭಾಗಗಳಲ್ಲಿ ಪಥಮ, ದ್ವಿತಿಯಾ, ತೃತೀಯ ಹಾಗೂ 5 ಸರ್ಟಿಫಿಕೇಟ್ ಆಫ್ ಮೆರಿಟ್ ಪಶಸ್ತಿಯನ್ನು ನೀಡಲಾಗುವುದು.

ನಗದು ಅನುಕ್ರಮವಾಗಿ ರೂ. 7,500, ರೂ. 5,000 ಹಾಗೂ ರೂ. 3,000 ಪಶಸ್ತಿ ಪತ್ರವನ್ನು ನೀಡಲಾಗುವುದು.ಕಲರ್‍ಫುಲ್ ಇಂಡಿಯಾ ವಿಭಾಗಳಲ್ಲಿ ಪಥಮ, ಬೆಂಗಳೂರಿನ ಶರತ್ ಆಚಾರ್ಯ, ದ್ವಿತೀಯ ಉತ್ತರ ಪದೇಶದ ಅನುಪಮ್ ಗುಹಾ, ತೃತೀಯ ಕೋಲ್ಕತ್ತದ ದೀಪಕ್ ಶಾ ಬಹುಮಾನ ಪಡೆದಿದ್ದಾರೆ.ರೂರಲ್ ಲೈಫ್ ವಿಭಾಗದಲ್ಲಿ ಪ್ರಥಮ ಕೋಲ್ಕೊತ್ತದ ಅನುಪಮ್ ರಾಯ್ ಚೌದರಿ, ದ್ವಿತೀಯ ಮುಂಬಯಿಯ ದೀಪಕ್ ಬಾರಾಟಕ್ಕೆ, ತೃತೀಯ ಕಾಕಿನಾಡದ ತುಮ್ಮಾಲಪಲ್ಲಿ ವೀರಭದ್ರ ರಾವ್ ಬಹುಮಾನ ಪಡೆದಿದ್ದಾರೆ, ವೈಲ್ಡ್ ಲೈಫ್ ವಿಭಾಗದಲ್ಲಿ ಪ್ರಥಮ ಬೆಂಗಳೂರಿನ ಯಶವಂತ್ ಎಲ್, ದ್ವಿತೀಯ ಕದರಮಂಡಲಗಿಯ ಶಶಿಧರಸ್ವಾಮಿ ಹಿರೇಮಠ, ತೃತೀಯ ಗುವಾಹತಿಯ ಅಶೋಕ್‍ಕುಮಾರ್ ದಾಸ್ ಬಹುಮಾನ ಪಡೆದಿದ್ದಾರೆ. ಮೊನೋಕ್ರೋಮ್ ವಿಭಾಗದಲ್ಲಿ ಪಥಮ ಚಂಡೀಗಡದ ವಿನೋದ್ ಚೌಹಾಣ್, ದ್ವಿತೀಯ ಬೆಂಗಳೂರಿನ ವರದ ನಾಯಕ, ತೃತೀಯ ಕೋಲ್ಕೊತ್ತದ ಶಿಬಾಶಿಶ್ ಸಹಾ ಬಹುಮಾನ ಪಡೆದಿದ್ದಾರೆ.

Related posts

Leave a Reply