Header Ads
Header Ads
Header Ads
Breaking News

ರಾಹುಲ್‌ರಿಂದ ಮಹಿಳೆಯರಿಗೆ ಅಗೌರವ :ಸುಳ್ಯದಲ್ಲಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ

ಮಹಿಳೆಯರಿಗೆ ಅಗೌರವ ತೋರಿಸಿ ಕೀಳುಮಟ್ಟದ ಹೇಳಿಕೆ ನೀಡಿ ಅವಮಾನ ಎಸಗಿರುವ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯ ವಿರುದ್ದ ಸುಳ್ಯದಲ್ಲಿ ಮಹಿಳಾ ಮೋರ್ಚಾದಿಂದ ಖಂಡನಾ ಪ್ರತಿಭಟನೆ ನಡೆಯಿತು.

ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಕಾಂಗ್ರೆಸ್ ನಾಯಕರು ಹಿಂದೂ ವರೋಧಿಗಳಂತೆ ವರ್ತನೆ ಮಾಡುತ್ತಿದ್ದಾರೆ. ರಾಜ್ಯದ ಸರಕಾರ ಕೂಡ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ಮೋದಿಯವರನ್ನು ರಾಜ್ಯದ ಉನ್ನತ ಹುದ್ದೆಯಲ್ಲಿರುವ ಸಚಿವರೊಬ್ಬರು ಕೀಳು ಮಟ್ಟದ ಪದ ಬಳಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರ ಸಂಸ್ಕೃತಿ ಏನೆಂಬುದು ತಿಳಿದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇದೇ ಪೃವೃತ್ತಿ ರೂಡಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ದಮನಕಾರಿ ನೀತಿ ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣ ಆಗಲಿದೆ ಎಂದು ಹೇಳಿದರು.


ಪ್ರತಿಭಟನೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಎ.ಪಿ.ಎಂ.ಸಿ ಅಧ್ಯಕ್ಷ ದೇರಣ್ಣ ಗೌಡ, ತಾಲೂಕು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಆಶ್ರಫ್ ಖಾಸಿಲೆ ಮಹಿಳಾ ಮೋರ್ಚಾದ ಅಧ್ಯಕ್ಷೆ ಶೋಭಾ ನಲ್ಲೂರಾಯ, ತಾ,ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮುಖಂಡರಾದ ಪ್ರಕಾಶ್ ಹೆಗ್ಡೆ, ಗಣಪತಿ ಭಟ್ ಮಜಿಗುಂಜಿ, ದಿನೇಶ್ ಅಡ್ಕಾರ್, ಗುಣವತಿ ಕೊಲ್ಲಂತಡ್ಕ, ನವೀನ್ ರೈ ಮೇನಾಲ, ಸುಬೋದ್ ಶೆಟ್ಟಿ ಮೇನಾಲ ನ.ಪಂ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಜಾನಕಿ, ಭಾಗ್ಯಪ್ರಸನ್ನ, ಜಯಂತಿ ಅಜ್ಜಾವರ, ಶಶಿಕಲಾ ನಾಯಕ್ ಜಾಲ್ಸೂರು, ಸೀತಾ ಎಚ್, ಚಂದ್ರಾ ಕೋಲ್ಚಾರ್, ಬಾಲಚಂದ್ರ ದೇವರಗುಂಡ, ಬಾಲಗೋಪಾಲ ಸೇರ್ಕಜೆ, ರಾಜೇಶ್ವರಿ, ಎ.ಪಿ.ಎಂ.ಸಿ ಸದಸ್ಯೆ ಸುಕನ್ಯಾ ಭಟ್, ಸರೋಜಿನಿ ಪೆಲ್ತಡ್ಕ, ಶಾರದ ಶೆಟ್ಟಿ, ಸಂಜಯ ಕುಮಾರ್ ಪೈಚಾರ್, ಶೀನಪ್ಪ ಬಯಂಬು, ಕಿಶನ್ ಜಬಳೆ, ಸುದರ್ಶನ ಪಾತಿಕಲ್ಲು ಮೊದಲಾದವರು ಭಾಗವಹಿಸಿದರು

Related posts

Leave a Reply