Header Ads
Header Ads
Breaking News

ರಾ. ಹೆದ್ದಾರಿ ಅಗಲೀಕರಣದಿಂದ ತೆರವು ಕಾರ್ಯಾಚರಣೆ ಶಿರಾಲಿ ಶಾಲೆ, ದೇವಸ್ಥಾನದ ಸಮೀಪ ಗೂಡಂಗಡಿ ವ್ಯಾಪಾರ ವ್ಯಾಪಾರಿಗಳ ಮತ್ತು ಸಾರ್ವಜನಿಕರಿಂದ ಆಕ್ರೋಶ

ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ, ತೆರವು ಕಾರ್ಯಾಚರಣೆಯಿಂದ ತೆರವಾದ ಗೂಡಂಗಡಿಗಳನ್ನು, ದೇವಸ್ಥಾನ ಹಾಗು ಸರಕಾರಿ ಶಾಲೆಯ ಪಕ್ಕದಲ್ಲಿಟ್ಟು ವ್ಯಾಪಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ಸ್ಥಳಿಯ ಸಾರ್ವಜನಿಕರು ಮಾಧ್ಯಮದ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಶಿರಾಲಿಯ ಕೆಲವು ಗೂಡಂಗಡಿಕಾರರು, ತಮ್ಮ ಅಂಗಡಿ ರಸ್ತೆ ಅಗಲಿಕರಣದಿಂದ ಭೂಸ್ವಾದೀನಕ್ಕೊಳಪಡುತ್ತಿರುವ ಹಿನ್ನೆಲೆಯಲ್ಲಿ, ಅಂಗಡಿಯನ್ನು ದೇವಸ್ತಾನದ ಆವರಣದಲ್ಲಿಟ್ಟು ವ್ಯಾಪಾರ ನಡೆಸುತ್ತಿದ್ದರು. ಇವರು ವ್ಯಾಪಾರ ನಡೆಸುತ್ತಿರುವ ಅಂಗಡಿಗಳಲ್ಲಿ, ಬೀಡಿ ಸಿಗರೇಟ್ ಪಾನ್ ಪರಾಗ್ ಗುಟಕಾಗಳಂತ ಮಾದಕ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾಜಿ ಸೈನಿಕರಾದ, ಎಂ.ಡಿ.ಪಕ್ಕಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಅಂಗಡಿಯನ್ನು ಇಟ್ಟರುವುದರಿಂದ, ದೇವರಿಗೆ ಅಪಚಾರವೆಸಗಿದಂತಾಗುತ್ತದೆ. ಅಲ್ಲದೆ ಅಂಗಡಿಯಲ್ಲಿ ಬೀಡಿ ಸಿಗರೇಟ್ ಪಾನ್ ಪರಾಗ್ ಗುಟಕಾಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ವ್ಯಾಪಾರಕ್ಕೆ ಬರುವವರು ಪಾದರಕ್ಷೆಗಳನ್ನು ಹಾಕಿ ಬರುತ್ತಾರೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗುತ್ತದೆ. ಈ ಅಂಗಡಿಯನ್ನು ತೆರವು ಮಾಡಬೇಕು ಎಂದು ಹೇಳಿದರು.
ವರದಿ:ರಾಘವೇಂದ್ರ ಮಲ್ಯ ಭಟ್ಕಳ