Header Ads
Header Ads
Breaking News

‘ರಿಬ್ಬನ್ಸ್ ಆಂಡ್ ಬಲೂನ್ಸ್’-ದಿ ಕೇಕ್ ಶಾಫ್ .ಮಂಗಳೂರಿನ ಬಳ್ಳಾಲ್‌ಬಾಗ್ ಸರ್ಕಲ್ ಬಳಿ ಶುಭಾರಂಭ.

ಮುಂಬೈ ಮತ್ತು ಪುಣೆಯಲ್ಲಿ100 ಶಾಫ್‌ಗಳನ್ನು ಹೊಂದಿರುವ ಮತ್ತು ಪ್ರತಿಷ್ಠಿತ ಕೇಕ್ ಶಾಫ್‌ಗಳಲ್ಲಿ ಒಂದಾದ ’ರಿಬ್ಬನ್ಸ್ ಆಂಡ್ ಬಲೂನ್ಸ್- ದಿ ಕೇಕ್ ಶಾಫ್’ ಮಂಗಳೂರಿನಲ್ಲಿ ಶುಭಾರಂಭಗೊಂಡಿತು.ಮಂಗಳೂರಿನ ಜನತೆಗೆ ಸಿಹಿ ಸುದ್ದಿ ಎನ್ನುವಂತೆ ದೇಶ ವಿದೇಶಗಳಲ್ಲಿ ಅದ್ಭುತ ಮನ್ನಣೆಯನ್ನು ಪಡೆದು, ನಿಮ್ಮ ಎಲ್ಲಾ ಶುಭ ಸಮಾರಂಭಗಳಿಗೆ ಹುಟ್ಟು ಹಬ್ಬದ ಆಚರಣೆಗಳಿಗೆ ಎಲ್ಲಾ ಪ್ಲೇವರ್‌ನ ಕೇಕ್ ಸಿಗುವ ಮತ್ತು ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಲೇ ಬೇಕೆನಿಸುವ, ಬಾಯಿಯಲ್ಲಿ ನೀರೂರಿಸುವ ಶುಚಿರುಚಿಯಾದ ಕೇಕ್ ಶಾಫ್ ’ರಿಬ್ಬನ್ಸ್ ಆಂಡ್ ಬಲೂನ್ಸ್- ದಿ ಕೇಕ್ ಶಾಫ್’ ಮಂಗಳೂರಿನ ಲಾಲ್‌ಬಾಗ್ ಟವರ್‍ಸ್, ಬಳ್ಳಾಲ್‌ಬಾಲ್ ಸರ್ಕಲ್ ಬಳಿ ಶುಭಾರಂಭಗೊಂಡಿತು. ‘ರಿಬ್ಬನ್ಸ್ ಆಂಡ್ ಬಲೂನ್ಸ್- ದಿ ಕೇಕ್ ಶಾಫ್’ನ್ನು ಉದ್ಘಾಟನೆ ಮಾಡಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಮೊಲಿ ಮುಂಬೈ ಮತ್ತು ಪುಣೆಯಲ್ಲಿ ಯಶಸ್ವಿಯಾಗಿ ಮಂಗಳೂರಿಗೆ ಲಗ್ಗೆ ಇಟ್ಟಿದೆ ಮತ್ತು ಉತ್ತಮ ಸ್ಥಳದಲ್ಲಿಯೇ ಶುಭಾರಂಭಗೊಂಡಿದೆ ಇದ್ದಕ್ಕೆ ಮಂಗಳೂರಿನ ಜನತೆಯ ಸಹಕಾರ ಇದೆ ಎಂದು ಹೇಳಿದರು.ನಂತರ ಮಾತನಾಡಿದ ಹಿರಿಯ ನಟ ಹರೀಶ್ ಶೆಟ್ಟಿ ಮುಂಬೈ ಮತ್ತು ಪುಣೆ ಮಾತ್ರವಲ್ಲ ದೇಶ ವಿದೇಶದಲ್ಲಿ ಹೆಸರು ಮಾಡಿದ ’ರಿಬ್ಬನ್ಸ್ ಆಂಡ್ ಬಲೂನ್ಸ್- ದಿ ಕೇಕ್ ಶಾಫ್’ ನಮ್ಮ ಮಂಗಳೂರಿನಲ್ಲಿ ಆರಂಭಗೊಂಡಿರುವುದು ನಮಗೆ ಸಂತೋಷದ ವಿಚಾರ ಎಂದು ಹೇಳಿದರುಈ ಸಂದರ್ಭ ಸಿಇಒ ಯಶ್ ಶೆಟ್ಟಿ, ಪಾಲುದಾರರಾದ ತನ್ಮಯ್ ಗೋಕಾಲೆ, ಪಾಲುದಾರ ಮತ್ತು ಆರ್ಥಿಕ ಸಲಹೆಗಾರರಾದ ಸತೀಶ್ ಶೆಟ್ಟಿ, ಪ್ರೋಡ್ಯೂಸರ್ ಗಿರೀಶ್ ಶೆಟ್ಟಿ, ಲಕ್ಷ್ಮಿ ಶೆಣೈ ತುಳು ಚಿತ್ರರಂಗದ ನಟ ನಟಿಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply