Header Ads
Header Ads
Breaking News

ರಿಲಾಕ್ಷ್ ಮೂಡ್‌ನಲ್ಲಿ ಅಭ್ಯರ್ಥಿಗಳು ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು

ಚುನಾವಣೆ ಮುಗಿದ ನಂತರ ಈಗ ಎಲ್ಲ ಕಡೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ತಿಂಗಳುಗಳ ಕಾಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬೀದಿ ಬೀದಿ ತಿರುಗಾಡಿ ಮತಯಾಚನೆ ಮಾಡುತ್ತಿದ್ದ ಅಭ್ಯರ್ಥಿಗಳು ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.ಶನಿವಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಎಂದಿನಂತೆ ತನ್ನ ವ್ಯಾಯಮ, ಯೋಗಾಸನಗಳನ್ನು ಮುಗಿಸಿ ಕೆಲ ಸಮಯವನ್ನು ಕುಟುಂಬ ವರ್ಗದವರೊಂದಿಗೆ ಕಳೆದು ಬಳಿಕ 10:30ರವರೆಗೆ ಮನೆಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿದ್ದಾರೆ. ಬಳಿಕ ಉಪ್ಪಿನಂಗಡಿಯಲ್ಲಿ ತನ್ನ ಸಹೋದರನ ಉತ್ತರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಕ್ ಉಳಿಪಾಡಿಗುತ್ತು ಚುನಾವಣೆಯ ಬಳಿಕವೂ ಎಂದಿನಂತೆ ತನ್ನ ದಿನಚರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ 09:30ರವರಗೆ ಮನೆಗೆ ಭೇಟಿ ನೀಡಿದ ಸಾರ್ವಜನಿಕರನ್ನು ಭೇಟಿ ಮಾಡಿದ ಅವರು ಬಳಿಕ ಕಕ್ಕೆಪದವು, ಸಿದ್ದಕಟ್ಟೆ, ಕನ್ಯಾನ, ಬಿ.ಸಿರೋಡು, ಮೊದಲಾದೆಡೆ ನಡೆದ ವಿವಾಹ, ಗೃಹಪ್ರವೇಶ, ಸತ್ಯನಾರಯಣಪೂಜೆ ಮೊದಲಾದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ.ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ತಮ್ಮ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಬಳಿಕ ತಮ್ಮ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದರು.ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯ್ದಿನ್ ಬಾವಾ ಅವರು, ಬೆಳಿಗ್ಗೆ ವಾಕಿಂಗ್ ನಡೆಸಿ ಬಳಿಕ ಸ್ವಿಮ್ಮಿಂಗ್ ಮಾಡಿದರು. ದಶಕದ ರಾಜಕೀಯ ಜೀವನ ಹಾಗೂ ಐಸು ವರ್ಷ ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರೀ ರಕ್ಷೆಯಾಗಲಿದೆ ಎಂದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ರವರು ಉಡುಪಿ ಯ ಹಾವಂಜೆಯಲ್ಲಿ ಹೆನ್ರಿ ಡಿಸೋಜ ರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದರು..ತದನಂತರ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು.ಅಂತೆಯೆ ಬಿಜೆಪಿ ಪಕ್ಷದ ಅಭ್ಯರ್ಥಿ ರಘುಪತಿ ಭಟ್ ಉಡುಪಿ ಆರೂರಿನಲ್ಲಿ ಗೃಹಪ್ರವೇಶ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಜನರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.

Related posts

Leave a Reply