Breaking News

ರಿಸರ್ವ್ ಬ್ಯಾಂಕಿಗೆ ವ್ಯಾಪಕ ಅಧಿಕಾರದ ಸುಗ್ರೀವಾಜ್ಞೆ,  ಮರುಪಾವತಿಯಾಗದ ೬,೦೦,೦೦೦ ಕೋಟಿ ವಸೂಲಿಗೆ ಕ್ರಮ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಮರುಪಾವತಿಯಾಗದ ಸಾಲ ವಸೂಲಿಗೆ ಕ್ರಮ ಕೈಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ಗೆ ವ್ಯಾಪಕ ಅಧಿಕಾರ ನೀಡುವ ಸುಗ್ರೀವಾಜ್ಞೆ ಹೊರಡಿಸಲಾಗಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಹಿ ಹಾಕಿದ್ದಾರೆ. ಸಾಲ ವಸೂಲಿಗೆ ಬ್ಯಾಂಕ್ಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬ್ಯಾಂಕ್ಗಳಿಗೆ ನಿರ್ದೇಶನ ನೀಡಲು ಈ ಸುಗ್ರೀವಾಜ್ಞೆಯು ಆರ್ಬಿ‌ಐಗೆ ಅಧಿಕಾರ ನೀಡಲಿದೆ. ಹಣಕಾಸು ನಷ್ಟ ಮತ್ತು ದಿವಾಳಿ ನೀತಿಸಂಹಿತೆ ೨೦೧೬ ಕಾಯ್ದೆಯಡಿ, ಸಾಲ ತೀರಿಸಲಾಗದವರ ವಿರುದ್ಧ ಕ್ರಮ ಕೈಗೊಳ್ಳಲು ಆರ್ಬಿ‌ಐ ಬ್ಯಾಂಕ್ಗಳಿಗೆ ಮಾರ್ಗದರ್ಶನ ಮಾಡಲಿದೆ.
ಬ್ಯಾಂಕ್ಗಳ ವಸೂಲಾಗದ ಸಾಲದ ಪ್ರಮಾಣವು ರೂ. ೬ ಲಕ್ಷ ಕೋಟಿಗೆ ತಲುಪಿದೆ. ಇದರಲ್ಲಿ ವಿದ್ಯುತ್, ಇಂಧನ, ರಸ್ತೆ ಮೂಲ ಸೌಕರ್ಯ ಮತ್ತು ಜವಳಿ ಉದ್ದಿಮೆ ವಲಯದ ಪಾಲು ಗರಿಷ್ಠ ಮಟ್ಟದಲ್ಲಿ ಇದೆ. ಎನ್ಪಿ‌ಎ ಸ್ವೀಕಾರಾರ್ಹವಲ್ಲದ ಗರಿಷ್ಠ?ಮಟ್ಟಕ್ಕೆ ತಲುಪಿದೆ. ಈ ಗಂಭೀರ ಸ್ವರೂಪದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ವಿವಿಧ ಬ್ಯಾಂಕ್ಗಳು ಸೂಚಿಸುವ ಎನ್ಪಿ‌ಎ ಪ್ರಕರಣಗಳನ್ನು ಪರಿಶೀಲಿಸಲು ಆರ್ಬಿ‌ಐ ಪ್ರತ್ಯೇಕ ಸಮಿತಿಗಳನ್ನೂ ರಚಿಸಲಿದೆ. ಬ್ಯಾಂಕಿಂಗ್ ವಲಯದಲ್ಲಿನ ಎನ್ಪಿ‌ಎ ಪ್ರಮಾಣ?ತಗ್ಗಿಸುವ ಸರ್ಕಾರದ ಪ್ರಯತ್ನಗಳಿಗೆ ವೇಗ ನೀಡಲಿದೆ.

Related posts

Leave a Reply