Header Ads
Header Ads
Breaking News

ರೂ. 3,500 ಕೋಟಿ ಮೌಲ್ಯದ ಹೆರಾಯಿನ್, ಗುಜರಾತ್ ಕರಾವಳಿಯಲ್ಲಿ ಐಸಿಜಿ ವಶಕ್ಕೆ

ಗುಜರಾತ್ ಕರಾವಳಿ ತೀರದಲ್ಲಿ ವ್ಯಾಪಾರಿ ಹಡಗಿನಲ್ಲಿ ಸಾಗಿಸುತ್ತಿದ್ದ ರೂ,. 3,500 ಕೋಟಿ ಮೌಲ್ಯದ 1,500  ಕೆ.ಜಿ. ಹೆರಾಯಿನ್‌ಅನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಕ್ಕೆ ಪಡೆದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಈ ಸಂಬಂಧ ಐಸಿಜಿ, ಗುಪ್ತಚರ ವಿಭಾಗ, ಪೊಲೀಸ್ ಇಲಾಖೆ, ತೆರಿಗೆ ಇಲಾಖೆ, ನೌಕಾಪಡೆ ಮತ್ತು ಇತರ ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ನಡೆಸುತ್ತಿವೆ. ಗುಜರಾತ್ ಕರಾವಳಿಯಲ್ಲಿ ರೂ. ೩,೫೦೦ ಕೋಟಿ ಮೌಲ್ಯದ ೧,೫೦೦ ಕೆ.ಜಿ. ಹೆರಾಯಿನ್ ಅನ್ನು ಸಾಗಿಸುತ್ತಿದ್ದ ವ್ಯಾಪಾರಿ ಹಡಗನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯ ಹಡಗು ಸಮುದ್ರ ಪಾವಕ್ ಮೂಲಕ ತಡೆಹಿಡಿಯಲಾಗಿದೆ ಎಂದು ರಕ್ಷಣಾ ವಕ್ತಾರ ಅಭಿಷೇಕ್ ಮಾತಿಮನ್ ಹೇಳಿದ್ದಾರೆ. ಗುಪ್ತಚರ ಮಾಹಿತಿ ಮೇರೆಗೆ ರಾತ್ರಿ ೧೨ಕ್ಕೆ ಹಡಗನ್ನು ತಡೆಹಿಡಿಯಲಾಗಿದೆ. ಹಡಗು ಸಮುದ್ರದಲ್ಲಿರುವುದರಿಂದ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Related posts

Leave a Reply