Header Ads
Breaking News

ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದ ಬೈಕ್ ಕಳ್ಳ ; ಪಡುಬಿದ್ರಿ ಪೇಟೆಯಲ್ಲಿ ನಡೆದ ಘಟನೆ

ಪಡುಬಿದ್ರಿ: ಪಡುಬಿದ್ರಿ ಪೇಟೆ ಬಳಿ ನಿಲ್ಲಿಸಿ ಹೋಗುತ್ತಿದ್ದ ಬೈಕನ್ನು ಯುವಕನೊರ್ವ ಲಾಕ್ ತುಂಡರಿಸಿ ನಿರಂತರವಾಗಿ ಕದ್ದು ಚಲಾಯಿಸುತ್ತಿದ್ದು, ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಧರ್ಮದೇಟು ತಿಂದು ಪೊಲೀಸ್ಅಥಿತಿಯಾಗಿದ್ದಾನೆ.ತಪ್ಪು ಮಾಡಿ ಸಾರ್ವಜನಿಕ ರಿಂದ ಒದೆತ ತಿಂದಾತ ಪಣಿಯೂರು ನಿವಾಸಿ ಸೈಯ್ಯದ್.

ಪಡುಬಿದ್ರಿ ದೇವಳದ ಬಳಿಯ ನಿವಾಸಿಯೋರ್ವರು ಪೇಟೆ ಸಮೀಪದ ಮಹಾದೇವಿ ಕಟ್ಟಡದ ಬಳಿ ದಿನನಿತ್ಯ ಬೈಕ್ ನಿಲ್ಲಿಸಿ ಬಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಇದನ್ನು ಗಮನಿಸುತ್ತಿದ್ದ ಅದೇ ಕಟ್ಟಡದಲ್ಲಿ ಮಿಕ್ಸಿ ರಿಪೇರಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸೈಯ್ಯದ್ ಒಂದು ದಿನ ಆ ಬೈಕಿನ ಲಾಕ್ ಕಟ್ ಮಾಡಿ ತಿರುಗಾಟ ನಡೆಸಲಾರಂಬಿಸಿದ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಈ ವಂಚನೆ ತಿಳಿಯದ ಬೈಕ್ ಮಾಲಿಕ ಮೈಲೇಜ್ ಕಡಿಮೆಯಾಗುತ್ತಿದ್ದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರು. ಯಾವುದೋ ಅನಿವಾರ್ಯ ಕಾರಣಕ್ಕೆ ಕೆಲಸದಿಂದ ಕೊಂಚ ಬೇಗನೆ ಆಗಮಿಸಿದ್ದು, ಬೈಕ್ ಇಟ್ಟ ಸ್ಥಳದಲ್ಲಿ ಬೈಕ್ ಕಾಣದಿದ್ದಾಗ ಸ್ಥಳೀಯರಲ್ಲಿ ವಿಚಾರಿಸಿದಾಗ ಗೊಂದಲ ಏರ್ಪಟಿತ್ತು. ಅದೇ ವೇಳೆ ಕದ್ದು ಸಾಗಿಸಿದ ಬೈಕನ್ನು ನಿಲ್ಲಿಸಲು ಬಂದ ಯುವಕ ಪರಿಸ್ಥಿತಿ ಅರಿತು ಬೈಕಿಟ್ಟು ಓಡಲಾರಂಭಿಸಿದ್ದು, ತಕ್ಷಣ ಸ್ಥಳೀಯರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಈ ಸಂದರ್ಭ ಆರೋಪಿಯ ಪರ ವಕಲಾತ್ ನಡೆಸಲು ಬಂದ ಒಂದಿಬ್ಬರಿಗೆ ಸಾರ್ವಜನಿಕರು ಮಾತಿನಲ್ಲಿ ಚೆನ್ನಾಗಿ ಬೈದಿದ್ದಾರೆ. ಆ ಬಳಿಕ ಬಂದ ಪೆÇಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *