Header Ads
Header Ads
Header Ads
Breaking News

ರೇಶನ್ ಕಾರ್ಡು ವಿತರಣೆಗೆ ಚಾಲನೆ

ಮಂಜೇಶ್ವರ: ಕಳೆದ ಕೆಲವು ವರ್ಷಗಳಿಂದ ಕಾತುರರಾಗಿದ್ದ ಜನತೆಗೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜಿಲ್ಲೆಯಲ್ಲಿ ರೇಶನ್ ಕಾರ್ಡುಗಳನ್ನು ವಿತರಿಸಲು ಸಿವಿಲ್ ಸಪ್ಲೈ ಅಧಿಕಾರಿಗಳು ಕೊನೆಗೂ ಮುಂದೆ ಬಂದಿದ್ದಾರೆ. ವರ್ಷಗಳಿಗೆ ಮುಂಚಿತವಾಗಿಯೇ ಮಾಹಿತಿಯನ್ನು ಪಡೆದು ಹೋಗಿದ್ದ ಅಧಿಕಾರಿಗಳು ಬಳಿಕ ಹಲವು ಕಾರಣಗಳನ್ನು ಮುಂದಿಟ್ಟು ವಿಳಂಭಗೊಳಿಸಿದ್ದರು.

ಶುಕ್ರವಾರದಂದು ಮಂಜೇಶ್ವರ ಗ್ರಾ. ಪಂಚಾಯತಿನ 1 ನೇ ಹಾಗೂ ೩ನೇ ವಾರ್ಡುಗಳಲ್ಲಿ ಪಡಿತರಿಗೆ ರೇಶನ್ ಕಾರ್ಡುಗಳನ್ನು ವಿತರಿಸಲಾಯಿತು. ಈ ಬಗ್ಗೆ ಅಧಿಕಾರಿಗಳು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸದೇ ಇದ್ದ ಹಿನ್ನೆಲೆಯಲ್ಲಿ ಮಾಹಿತಿ ಅರಿಯದೆ ಹಲವರು ರೇಶನ್ ಕಾರ್ಡುಗಳನ್ನು ಪಡೆಯಲು ಗೈರು ಹಾಜರಿಯಾಗಿದ್ದಾರೆ.

ಶುಕ್ರವಾರ ವಿತರಣೆಯಾದ ಎ ಆರ್ ಡಿ 3 ನೇ ರೇಶನ್ ಅಂಗಡಿಯಲ್ಲಿ 674 ಕಾರ್ಡುಗಳಿದ್ದರೆ ಅದರಲ್ಲಿ 74 ಮಂದಿಗೆ ಸಿವಿಲ್ ಸಪ್ಲೈ ಕಚೇರಿಯಿಂದ ಇನ್ನೂ ರೇಶನ್ ಕಾರ್ಡುಗಳು ಬಂದಿಲ್ಲ. ಅದೇ ರೀತಿ ಎ ಆರ್ ಡಿ ಸಂಖ್ಯೆ 1 ರ ರೇಶನ್ ಅಂಗಡಿಯಲ್ಲಿ 674 ರೇಶನ್ ಕಾರ್ಡುಗಳಲ್ಲಿ 7 ಮಂದಿಗೆ ರೇಶನ್ ಕಾರ್ಡುಗಳು ಬಂದಿಲ್ಲ. ಅದೇ ರೀತಿ ಎ ಆರ್ ಡಿ ನಂಬ್ರ 4 ರ ರೇಶನ್ ಕಾರ್ಡನ್ನು ಪಡೆಯಲು ಸುಮಾರು ನೂರು ಮಂದಿ ಬಂದಿಲ್ಲ.

ಇದೆಲ್ಲ ಸಪ್ಲೈ ಕಚೇರಿ ಅಧಿಕಾರಿಗಳ ನಿರ್ಲ್ಯಕ್ಷದಿಂದ ಆಗಿದೆ. ಅದೇ ರೀತಿ ರೇಶನ್ ಕಾರ್ಡುಗಳಲ್ಲಿ ಪ್ರಕಟವಾದ ಹೆಸರಿನಲ್ಲೂ ಹಲವು ವ್ಯತ್ಯಾಸಗಳು ಕಂಡು ಬಂದಿರುವುದು ಜನತೆಯಲ್ಲಿ ಗೊಂದಲವನ್ನು ಸೃಷ್ಟಿಸಿದೆ.

ಎ ಆರ್ ಡಿ ಸಂಖ್ಯೆ 2, 6 ಹಾಗೂ 12 ರೇಶನ್ ಅಂಗಡಿಗಳಲ್ಲಿ ನಾಳೆ ಶನಿವಾರ ರೇಶನ್ ಕಾರ್ಡು ವಿತರಣೆಯಾಗಲಿದೆ. ಅದೇ ರೀತಿ 9 ,10 ಹಾಗೂ 13 ಎ ಆರ್ ಡಿ ನಂಬ್ರದ ರೇಶನ್ ಅಂಗಡಿಗಳಲ್ಲಿ ಸೋಮವಾರ ರೇಶನ್ ಕಾರ್ಡು ವಿತರಣೆಯಾಗಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

Related posts

Leave a Reply