Breaking News

ರೈತರಿಗೆ ಕೈಕೋಳ ತೊಡಿಸಿದ ತೆಲಂಗಾಣ ಪೋಲೀಸರು, ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

ವಿಧ್ವಂಸಕ ಕೃತ್ಯ ಎಸಗಿದ ಆರೋಪದ ಮೇಲೆ 10 ರೈತರಿಗೆ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆಯ ಬಗ್ಗೆ ವರದಿ ನೀಡುವಂತೆ ಖಮ್ಮಮ್ ಪೊಲೀಸರಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಸೂಚನೆ ನೀಡಿದೆ.
ಏಪ್ರಿಲ್ ೨೮ರಂದು ಈ ರೈತರು ಖಮ್ಮಮ್ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿನ ಕಚೇರಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ವಕೀಲ ಟಿ. ರಜನಿಕಾಂತ್ ರೆಡ್ಡಿ ಅವರು ಆಯೋಗಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಆಯೋಗವು, ಜೂನ್ ೫ರೊಳಗೆ ವರದಿ ನೀಡುವಂತೆ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದೆ.
ರೈತರಿಗೆ ಕೈಕೋಳ ತೊಡಿಸಿದ್ದರಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಅಲ್ಲದೆ ಇದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗೆ ಸಹ ವಿರುದ್ಧವಾಗಿದೆ ಎಂದು ರೆಡ್ಡಿ ಅವರು ದೂರಿದ್ದಾರೆ.

Related posts

Leave a Reply