Header Ads
Header Ads
Breaking News

ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರಕ್ಕೆ ಸಿಎಂರನ್ನು ಖುದ್ದು ಭೇಟಿ: ಬಂಟ್ವಾಳ ಶಾಸಕ ರಾಜೇಶ್ ನಾಕ್  ಹೇಳಿಕೆ

ಬಂಟ್ವಾಳ: ದ.ಕಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದ ಕಾರಣ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆ ಕೃಷಿಯು ಕೊಳೆ ರೋಗ ಪೀಡಿತವಾಗಿದ್ದು ಬೆಳೆ ಸಂಪೂರ್ಣವಾಗಿ ನಾಶವಾಗಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸಿ ಹೆಚ್ಚಿನ ಪರಿಹಾರಕ್ಕಾಗಿ ಮುಖ್ಯಮಂತ್ರಿಯವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಿರುವುದಾಗಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಹೇಳಿದ್ದಾರೆ.

ಬಿ.ಸಿ. ರೋಡಿನ ಶಾಸಕರ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿದಅವರು ಈ ಬಗ್ಗೆ ಜಿಲ್ಲೆಯ ಸಮಗ್ರ ಚಿತ್ರಣ ನೀಡುವಂತೆ ಮುಖ್ಯಮಂತ್ರಿ ಜಿಲ್ಲಾಧಿಕಾರಿವರಿಗೆ ಸೂಚಿಸಿದ್ದು ತಹಶೀಲ್ದಾರ್ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ತಂಡ ರಚಿಸಿ ಸರ್ವೇ ನಡೆಯಲಿದೆ, ಈ ಬಾರಿಯ ಅತಿವೃಷ್ಟಿಯಿಂದ ಸಾಕಷ್ಟು ಅಡಿಕೆ ತೋಟ ನಾಶವಾಗುವ ಪರಿಸ್ಥಿತಿಯಿದ್ದು ಶೀಘ್ರ ಪರಿಹಾರ ನೀಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿರುವುದಾಗಿ ಅವರು ತಿಳಿಸಿದರು, ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಯವರು ದ.ಕಜಿಲ್ಲಾಧಿಕಾರಿ ಹಾಗೂ ತೋಟಗಾರಿಕಾ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ವರದಿ ಬಂದ ನಂತರ ಬೆಳೆಹಾನಿಗೆ ಅನುಕ್ರಮವಾಗಿ ಪರಿಹಾರ ನೀಡಲು ಭರವಸೆ ನೀಡಿರುವುದಾಗಿ ರಾಜೇಶ್ ನಾಕ್ ತಿಳಿಸಿದರು.

Related posts

Leave a Reply