Header Ads
Header Ads
Header Ads
Breaking News

ರೈತರ ಸಮಸ್ಯೆಯನ್ನು ಪ್ರಧಾನಿಗೆ ತಿಳಿಸುವ ಧೈರ್ಯ ಮಾಡಲಿ ನಮ್ಮ ಸಂಸದರು, ಶಾಸಕರು ಮಾಡಲಿ ಸುಳ್ಯದಲ್ಲಿ ಕೆಪಿಸಿಸಿ ಸದಸ್ಯ ಎಂ. ವೆಂಕಪ್ಪ ಗೌಡ ಹೇಳಿಕೆ

ಜಿಲ್ಲೆಯ ರೈತರ ಸಮಸ್ಯೆಯನ್ನು ಪ್ರಧಾನಿಗೆ ತಿಳಿಸುವ ಧೈರ್ಯವನ್ನು ನಮ್ಮ ಸಂಸದರು, ಶಾಸಕರು ಈಗಲಾದರೂ ಮಾಡಲಿ ಎಂದು ಕೆಪಿಸಿಸಿ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ನಮ್ಮ ದೇಶದ ಪ್ರಧಾನಿಯವರು ಭೇಟಿ ನೀಡುವುದು ಜಿಲ್ಲೆಯ ಜನತೆಗೆ ಸಂತೋಷ ತಂದಿದೆ. ಹಾಗಾಗಿ ನಮ್ಮ ಜಿಲ್ಲೆಯ ಧಾರ್ಮಿಕ ಕ್ಷೇತ್ರದ ಹೆಸರು ಇನ್ನಷ್ಟು ಪ್ರಸಿದ್ಧಿಗೊಂಡು ದೇಶ ವಿದೇಶದ ಭಕ್ತಾದಿಗಳು ಧರ್ಮಸ್ಥಳದ ಕಡೆಗೆ ನೋಡುವಂತಾಗುತ್ತದೆ.

ಪ್ರಸ್ತುತ ನಮ್ಮ ಜಿಲ್ಲೆಯ ರೈತರು ವಿಶೇಷವಾಗಿ ಅಡಿಕೆ, ಕರಿಮೆಣಸು, ರಬ್ಬರ್, ಕೊಕ್ಕೊ, ತೆಂಗಿನ ಕಾಯಿ ಇತ್ಯಾದಿ ಬೆಳೆಗಳಿಗೆ ಮಾರುಕಟ್ಟೆ ಬೆಲೆ ಕುಸಿತಗೊಂಡು ಈ ಭಾಗದ ರೈತನ ಬದುಕು ಅತ್ಯಂತ ದುಸ್ತರಗೊಂಡಿದೆ. ಪ್ರಧಾನಿ ಮೋದಿಯವರು ನಮ್ಮ ಜಿಲ್ಲೆಗೆ ಬರುವ ಈ ಸಂದರ್ಭದಲ್ಲಾದರೂ ನಮ್ಮ ರೈತರ ಸಮಸ್ಯೆಯನ್ನು ಪ್ರಧಾನಿಯವರಿಗೆ ಸ್ವತಃ ಹೇಳಬೇಕು. ಧೈರ್ಯ ಬಾರದೇ ಇದ್ದರೆ ಬಿ.ಜೆ.ಪಿ.ಯ ಇತರ ನಾಯಕರೊಂದಿಗೆ ಪ್ರಸ್ತಾಪಿಸಿ ರೈತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಒಂದು ವೇಳೆ ನಿಮಗೆ ಯಾರಿಗೂ ಆ ಧೈರ್ಯ ಬಾರದೇ ಇದ್ದರೆ ರೈತರಾದ ನಮಗೆ ಅಂತಹ ಜವಬ್ದಾರಿ, ಅವಕಾಶ ಮಾಡಿಕೊಟ್ಟಲ್ಲಿ ನಾವು ಸಮಸ್ಯೆಯನ್ನು ಪ್ರಧಾನಿಯವರಿಗೆ ಹೇಳಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇವೆ ಎಂಬುದಾಗಿ ಈ ಮೂಲಕ ಸಂಸದರನ್ನು ಹಾಗೂ ಬಿ.ಜೆ.ಪಿ. ನಾಯಕರನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು..

Related posts

Leave a Reply