Header Ads
Header Ads
Breaking News

ರೈತರ ಸಾಲ ಮನ್ನಾ ಮಾಡಲು ಸರಕಾರ ಬದ್ಧವಾಗಿದೆ:ಐವನ್ ಡಿಸೋಜಾ ಹೇಳಿಕೆ

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರೈತರ ಸಾಲಮನ್ನಾ ಮಾಡುತ್ತಿಲ್ಲವೆಂದು ರೈತರನ್ನು ಸರಕಾರದ ವಿರುದ್ಧ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಇದೊಂದು ಬಿಜೆಪಿ ಪ್ರಾಯೋಜಿತ ರೈತರ ಹೋರಾಟ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಪರವಾಗಿ ಒಂದು ಕಾರ್ಯಕ್ರಮವನ್ನೂ ಜಾರಿಗೊಳಿಸಲಾಗದ ಬಿಜೆಪಿಯವರಿಗೆ ಸಾಲ ಮನ್ನಾ ಮಾಡಬೇಕೆಂದು ಕೇಳುವ ನೈತಿಕತೆಯೇ ಇಲ್ಲ. ಹಸಿರು ಶಾಲುಗಳನ್ನು ಹಾಕಿ ಭಾಷಣ ಮಾಡಿದ್ದು ಬಿಟ್ಟರೆ ಬಿಜೆಪಿಯವರು ಬೇರೇನೂ ಮಾಡಿಲ್ಲ ಎಂದು ಹೇಳಿದರು. ರಾಮಮಂದಿರ ವಿಚಾರದಲ್ಲಿ ಬಿಜೆಪಿಯವರು ಅಲ್ಲಲ್ಲಿ ಜನಾಗ್ರಹ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಇವರ ಜನಾಗ್ರಹ ಯಾರಿಗಾಗಿ? ಕೋರ್ಟ್ ಆದೇಶ ಪಾಲನೆಗೆ ಮೋದಿಯವರು ಹೇಳಿರುವಾಗ ಈ ರೀತಿಯ ಕಾರ್ಯಕ್ರಮ ಮಾಡುತ್ತಿದ್ದಾರೆಂದರೆ ಅದು ಮೋದಿಯವರ ವಿರುದ್ಧವೇ ಎಂದು ಅನಿಸುತ್ತಿದೆ. ಕೇಂದ್ರ ಸರಕಾರ ಬಿಜೆಪಿಯವರ ಹಿಡಿತದಲ್ಲಿದ್ದು, ಅಲ್ಲಿಂದ ರಾಮ ಮಂದಿರದ ಕುರಿತು ಆಧ್ಯಾದೇಶ ಹೊರತರಲಿ ಎಂದು ಐವನ್ ಹೇಳಿದರು. ಜಿಲ್ಲೆಯಲ್ಲಿ ಮರಳು ಸಮಸ್ಯೆ ತಲೆದೋರಿದೆ. ಕೆಲವೇ ದಿನಗಳಲ್ಲಿ ಪರಿಹಾರ ಕಾಣಲಿದೆ. ಈಗಾಗಲೇ72 ಮಂದಿಗೆ ಪರವಾನಿಗೆ ನೀಡಲಾಗಿದೆ. ಸಿಆರ್‌ಝ್‌ನಲ್ಲಿ ಮರಳು ತಗೆಯಲಾಗುತ್ತಿದೆ. ನಾನ್‌ಸಿಆರ್‌ಝ್ ನಲ್ಲಿ ಕೆಲವೇ ದಿನದಲ್ಲಿ ಪರವಾನಿಗೆ ಸಿಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಕಾವು ಹೇಮನಾಥ್ ಶೆಟ್ಟಿ, ಜಯಪ್ರಕಾಶ್ ರೈ,, ವೆಂಕಪ್ಪ ಗೌಡ, ನಿತ್ಯಾನಂದ ಮುಂಡೋಡಿ, ಪಿ.ಎ.ಮಹಮ್ಮದ್, ಕೆ.ಂ. ಮುಸ್ತಫಾ ಎಸ್.ಸಂಶುದ್ದಿನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply