Header Ads
Header Ads
Breaking News

ರೈತ ನಾಯಕ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ಗಡಗಡ ನಡುಗುತ್ತಿತ್ತು : ಜಯರಾಮ ಶೆಟ್ಟಿ ಹೇಳಿಕೆ

ಉಳ್ಳಾಲ: ರೈತ ನಾಯಕ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ಗಡಗಡ ನಡುಗುತ್ತಿತ್ತು. ಅಂತಹ ನಾಯಕ ಯಡಿಯೂರಪ್ಪ ರಾಜಕೀಯ ವಿಚಾರದಲ್ಲಿ ಪಳಗಿದವರು, ರೈತರ ಸಾಲಮನ್ನಾ ಮಾಡುವಲ್ಲಿ ಪಾದಯಾತ್ರೆ ನಡೆಸಿ ಯಶಸ್ವಿಯಾದವರು. ಈ ಮೂಲಕ ಬಿಜೆಪಿ ರೈತರ ಕಾಳಜಿಯುಳ್ಳ ಪಕ್ಷ ಎಂದು ತೋರಿಸಿಕೊಟ್ಟವರು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಅವರು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸುತ್ತಿರುವ ಕ್ಷಣದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಆಧಾರದಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬೇಕಿತ್ತು. ಆದರೆ ಕಾಂಗ್ರೆಸ್-ಜೆಡಿಎಸ್ ಸೇರಿಕೊಂಡು ಅನೈತಿಕ ರಾಜ್ಯಭಾರ ನಡೆಸಿ ಇಂದು ದುರಂತಕ್ಕೀಡಾಗಿದೆ. ಇಂತಹ ರಾಜ್ಯಭಾರದಿಂದ ರೋಸಿಹೋದ ಸ್ವಪಕ್ಷೀಯ 15ಮಂದಿ ಶಾಸಕರು ಪಕ್ಷದ ಹಿರಿಯ ನಾಯಕರ ಮಾತುಗಳನ್ನು ಲೆಕ್ಕಿಸದೆ ಮುಂಬೈನಲ್ಲಿ ಕುಳಿತಿದ್ದಾರೆ. ಸರಕಾರ ಹೋಗಬೇಕೆನ್ನುವ ಅಭಿಲಾಷೆಯಿಂದ ಕುಳಿತಿರುವುದು ವಿಪರ್ಯಾಸ ಎಂದು ಹೇಳಿದ್ರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ ಉಳ್ಳಾಲ,ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಉಚ್ಚಿಲ್, ಜಿಲ್ಲಾ ಪಂ.ಸದಸ್ಯೆ ಧನಲಕ್ಷೀ ಗಟ್ಟಿ, ಹಿರಿಯರಾದ ಸೀತಾರಾಮ ಬಂಗೇರ, ಲಲಿತಾ ಸುಂದರ್, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *