Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ರೈತ ಸಂಘದ ಮುಖಂಡರ ಮೇಲಿನ ಮೊಕದ್ದಮೆ ರದ್ದುಗೊಳಿಸಲು ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಪುತ್ತೂರಿನಲ್ಲಿ ರೈತ ಸಂಘದಿಂದ ಮನವಿ ಸಲ್ಲಿಕೆ

 

ಪುತ್ತೂರು : ಏಳು ವರ್ಷದ ಹಿಂದೆ ಪುತ್ತೂರು ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕ್ ರೈತ ಮಹಿಳೆಯೊಬ್ಬರ ಭೂಮಿ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದ ವೇಳೆ ,ಹರಾಜು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ೧೦ ರೈತರ ಮೇಲೆ ಪುತ್ತೂರು ನ್ಯಾಯಾಲಯದಲ್ಲಿ ವಿನಾಕಾರಣ ಹೂಡಲಾಗಿದ್ದ ಮೊಕದ್ದಮೆಯನ್ನು ರದ್ದಗೊಳಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ,ಹಸಿರುಸೇನೆಯ ಮುಖಂಡರು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ್ ರೈ ಬೈಲುಗುತ್ತು, ರಾಜ್ಯ ಕಾರ್ಯದರ್ಶಿ ಸಿ.ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಈಶ್ವರ ಭಟ್ ಬಡಿಲ, ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ ಅವರ ನೇತೃತ್ವದಲ್ಲಿ ಸಂಘಟನೆಯ ಮುಖಂಡರು ಸೋಮವಾರ ನಿಯೋಗದಲ್ಲಿ ತೆರಳಿ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಅವರ ಮೂಲಕ ರಾಜ್ಯದ ಮುಖ್ಯಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ರೈತ ಸಂಘ,ಹಸಿರುಸೇನೆಯ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಈಶ್ವರ ಗೌಡ ಕುಂತೂರು, ಕೆ.ಶೇಖರ್ ರೈ, ಚೆನ್ನಪ್ಪ ಗೌಡ ನೆಲ್ಯಾಡಿ,
ಪಡುವನ್ನೂರು ವಲಯ ಸಮಿತಿಯ ವಿನೋದ್ ಶೆಟ್ಟಿ, ಕಂಬಳಬೆಟ್ಟು ವಲಯ ಸಮಿತಿಯ ಲಿಂಗಪ್ಪ ಗೌಡ ಮನವಿ ಸಲ್ಲಿಸುವ ವೇಳೆ ಹಾಜರಿದ್ದರು.

Related posts

Leave a Reply