Header Ads
Header Ads
Header Ads
Breaking News

ರೈಲಿನಲ್ಲಿ ಪಿಸ್ತೂಲ್ ತೋರಿಸಿ ದರೋಡೆ ಪ್ರಕರಣ 7 ಮಂದಿ ಅಂತರಾಜ್ಯ ದರೋಡೆಕೋರರ ಸೆರೆ ಉಡುಪಿ ಎಸ್ಪಿ ಡಾ.ಸಂಜೀವ್ ಪಾಟೀಲ್ ಹೇಳಿಕೆ

ಸೆಪ್ಟಂಬರ್ 17 ರಂದು ಮುಂಬಯಿ-ತ್ರಿವೆಂಡ್ರಮ್ ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ನಡೆದಿದ್ದ ರೈಲು ದರೋಡೆ ಪ್ರಕರಣವನ್ನು ಭೇಧಿಸುವಲ್ಲಿ ಉಡುಪಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಬಯಿಯ ಜಿ.ಎಂ.ಗೋಲ್ಡ್ ನ ಸೇಲ್ಸ್ ಮ್ಯಾನ್ ಆಗಿದ್ದ ರಾಜೇಂದ್ರ 4.112 ಕೆಜಿ ಚಿನ್ನಾಭರಣವನ್ನು ಸೂಟ್ ಕೇಸ್ ನಲ್ಲಿ ತಿವೆಂಡ್ರಮ್ ಗೆ ತೆಗೆದುಕೊಂಡು ಹೋಗುತ್ತಿದ್ದಾಗ ರೈಲಿನಲ್ಲಿ ದರೋಡೆಕೋರರ ಗುಂಪು ರಾಜೇಂದ್ರ ಅವರನ್ನು ಗಾಯಗೊಳಿಸಿ, ಹೆದರಿಸಿ ಚಿನ್ನಾಭರಣ ಇದ್ದ ಸೂಟ್ ಕೇಸ್ ದರೋಡೆ ಮಾಡಿದ್ದರು.

ಉಡುಪಿಯ ಪಡುಬಿದ್ರೆ ದಾಟುವ ಸಂದರ್ಬದಲ್ಲಿ ದರೋಡೆಕೋರರು ಈ ಕೃತ್ಯ ಎಸಗಿದ್ದರು. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದರೋಡೆ ಕೃತ್ಯಕ್ಕೆ ಹಳೇ ದ್ವೇಷವೇ ಕಾರಣವಾಗಿದ್ದು ಘಟನೆಯ 2 ವರೆ ತಿಂಗಳ ಬಳಿಕ ಆರೋಪಿಗಳ ಬಂಧನವಾಗಿದೆ. ಏಳು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸ್ವಿಯಾಗಿರುವ ಪೊಲೀಸರು ಇನ್ನಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಮಿಥುನ್, ಪಿಂಟೂ ಅರ್ಜುನ್, ಯೋಗೀಶ್ವರ್ ಸಿಂಗ್, ಮುಖ್ತಾರ್ ಇಬ್ರಾಹಿಂ, ರಿಯಾಝ್, ಪಿ.ಕೆ.ಮುರುಗನ್, ಪ್ರಭುಲಾಲ್ ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲೆ ಅಂತರಾಜ್ಯ ಮೋಸ್ಟ್ ವಾಂಟೆಡ್ ದರೋಡೆಕೋರರಾಗಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Related posts

Leave a Reply