Breaking News

ರೈಲಿನಲ್ಲಿ ಮಹಿಳೆಯ ಚಿನ್ನಾಭರಣ ಎಸ್ಕೇಪ್

ಮಂಗಳೂರು: ಮುಂಬೈಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲ್‌ನಲ್ಲಿ ಮಹಿಳೆಯೊಬ್ಬರ ಚಿನ್ನಾಭರಣ ಮತ್ತು ಪರ್ಸ್ ಕಳವಾದ ಘಟನೆ ವರದಿಯಾಗಿದೆ.
ಭಾಂಡುಮ್ ಪಶ್ಚಿಮ ನಿವಾಸಿ ಪ್ರತಿಮಾ ಸತೀಶ್ ಕರ್ಕೇರಾ ತಮ್ಮ ತವರೂರು ಸುರತ್ಕಲ್‌ಗೆ ಆಗಮಿಸಲು ಕುಲಾ ಟರ್ಮಿನಲ್‌ನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ರೈಲು ವಿದ್ಯಾವಿಹಾರ್‌ಗೆ ತಲುಪಿದ ಸಂದರ್ಭ ಯುವಕನೊಬ್ಬ ರೈಲು ಪ್ರವೇಶ ಮಾಡಿ ಮಹಿಳೆಯ ಹ್ಯಾಂಡ್ ಬ್ಯಾಂಗ್‌ನ್ನು ಅಪಹರಿಸಿ ಪರಾರಿ ಯಾಗಿದ್ದಾನೆ ಎನ್ನಲಾಗಿದೆ. ಹ್ಯಾಂಡ್ ಬ್ಯಾಗ್‌ನಲ್ಲಿ ೭೦ ಗ್ರಾಂ ತೂಕದ ಮಾಂಗಲ್ಯ ಸರ, ೧೦ ಗ್ರಾಂ ತೂಕದ ಬೆಂಡೋಲೆ, ೭೦೦೦ ರೂ. ನಗದು ಹಣ ಮತ್ತು ಸ್ನೇಹಿತರೊಬ್ಬರು ಮನೆ ಮಂದಿಗೆ ನೀಡಲು ಕೊಟ್ಟ ೫೦೦೦ರೂ. ನಗದು , ಮೊಬೈಲ್ ಇತ್ತು. ಇದನ್ನು ಆತ ಕಳವು ಮಾಡಿ ಅಪಹರಿಸಿದ್ದಾನೆ ಎಂದು ಎಂದು ತಿಳಿದು ಬಂದಿದೆ. ಪ್ರತಿಮಾ ಹೊಸದಾಗಿ ಖರೀದಿಸಿದ ಚಿನ್ನಾಭರಣಗಳನ್ನು ತವರೂರ ಮೂಲ ದೈವ- ದೇವರಿಗೆ ತೊಡಿಸಿ ಬಳಿಕ ಧರಿಸಿಕೊಳ್ಳುವ ಉದ್ದೇಶದಿಂದ ಖರೀದಿಸಿದ್ದರು.

Related posts

Leave a Reply