Header Ads
Breaking News

ಇಂದ್ರಾಳಿ-ಹಯಗ್ರೀವ ಸಮೀಪ ರೈಲು ಅಪಘಾತ ಎರಡು ದನದ ಕರು ಸಾವು

ಇಂದ್ರಾಳಿ- ಹಯಗ್ರೀವ ನಗರದ, ಸಮೀಪದ ರೈಲು ಹಳಿಯ ಮೇಲೆ, ಗುಂಪಾಗಿ ಸಂಚರಿಸುತ್ತಿದ್ದ ಜಾನುವಾರುಗಳಿಗೆ,ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಗಂಡು ಕರುಗಳು ಮೃತಪಟ್ಟಿವೆ. ಒಂದು ಗಂಡು ಕರು ಗಂಭೀರ ಗೊಂಡಿದ್ದು, ಮತ್ತೊಂದು ಪ್ರಾಣಾಪಾಯದಿಂದ ಪಾರಾಗಿದೆ. ದುರಂತವು ತಡರಾತ್ರಿ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಘಟನೆಯು ಮಂಗಳವಾರ ನಸುಕಿನ ಜಾವ ಉಡುಪಿಯ ನಾಗರಿಕ ಸಮಿತಿಯ ಕಾರ್ಯಕರ್ತರ ಗಮನಕ್ಕೆ ಬಂದಿದೆ. ಮಾಹಿತಿ ಪಡೆದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಘಟನ ಸ್ಥಳಕ್ಕೆ ಧಾವಿಸಿ ಬಂದು, ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಪಂದಿಸಿದ ರೈಲ್ವೆ ಮೆಲ್ವೀಚಾರಕ ಚಾಖೋ ಅವರು ಸಮಾಜಸೇವಕರ ಸಹಕಾರದೊಂದಿಗೆ ಎರಡು ಗಂಡು ಕರುಗಳ ಛಿದ್ರಗೊಂಡ ಕಳೇಬರಗಳನ್ನು ದಫನ ಮಾಡಿಸಿದ್ದಾರೆ. ಗಾಯಗೊಂಡ ಗಂಡು ಕರುವನ್ನು ಮಣಿಪಾಲ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Related posts

Leave a Reply

Your email address will not be published. Required fields are marked *