Header Ads
Breaking News

ರೈಲು ನಿಲ್ದಾಣದ ಪ್ರಗತಿ ಕಾರ್ಯವನ್ನು ಪರಿಶೀಲಿಸಿದ ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಆದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೇರಿರುವ ಬಿ.ಸಿ.ರೋಡಿನ ರೈಲ್ವೇ ನಿಲ್ದಾಣಕ್ಕೆ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲು ಅವರು ಭೇಟಿ ನೀಡಿ ಪ್ರಗತಿ ಕಾರ್ಯವನ್ನು ಪರಿಶೀಲಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಂಟ್ವಾಳ ರೈಲ್ವೇ ನಿಲ್ದಾಣದ ಫ್ಲಾಟ್‌ಪಾರಂಗಳ ಕೊರತೆಯನ್ನು ಮನಗಂಡು 1.57 ಕೋಟಿ ರುಪಾಯಿ ವೆಚ್ಚದ ಫ್ಲಾಟ್ ಫಾರಂ 1 ಹಾಗೂ 2.60 ಕೋಟಿ ರುಪಾಯಿ ವೆಚ್ಚದ ಎರಡನೇ ಫ್ಲಾಟ್‌ಫಾರಂ ನಿರ್ಮಿಸಲು ಉದ್ದೇಶಿಸಲಾಗಿದೆ. ಶೇ.6೦ರಷ್ಟು ಕಾಮಗಾರಿ ಮುಗಿದಿದೆ. ಫ್ಲಾಟ್ ಫಾರಂ 2 ಹಾಗೂ ನಗರಕ್ಕೆ ಹೋಗಲು ಅನುಕೂಲವಾಗುವಂತೆ ಪೂಟ್‌ಬ್ರಿಡ್ಜ್‌ನ ಬೇಡಿಕೆಯಿದ್ದು 78ಲಕ್ಷ ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಕಾಮಗಾರಿ ಆರಂಭಗೊಂಡಿದೆ ಎಂದರು. ಹತ್ತಾರು ಸಮಸ್ಯೆಗಳು ಈ ರೈಲ್ವೇ ನಿಲ್ದಾಣದಲ್ಲಿದ್ದು ಶಾಸಕ ರಾಜೇಶ್ ನಾಕ್ ಅವರು ಗಮನಕ್ಕೆ ತಂದ ಹಿನ್ನಲೆಯಲ್ಲಿ ಭೇಟಿ ನೀಡಲಾಗಿದೆ. ಅಭಿವೃದ್ದಿ ಸಮಯದಲ್ಲಿ ಸಣ್ಣಪುಟ್ಟ ಸ್ಥಳೀಯ ಸಮಸ್ಯೆಗಳು ಬರುವುದು ಸಹಜ. ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಅವಲೋಕನ ಮಾಡಿದ್ದು ಕಾಮಗಾರಿಗೆ ವೇಗ ನೀಡುವಂತೆ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡಿ ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳ ಒಳಗಾಗಿ ಇಲ್ಲಿನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನ ಉಪಯೋಗಕ್ಕೆ ಮುಕ್ತಿಗೊಳಿಸುವುದಾಗಿ ಅವರು ತಿಳಿಸಿದರು. ಬಂಟ್ವಾಳ ರೈಲ್ವೇ ನಿಲ್ದಾಣದ ಅಭಿವೃದ್ದಿಗೆ ೫.೫ ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿರುವ ಕೇಂದ್ರದ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

Related posts

Leave a Reply

Your email address will not be published. Required fields are marked *