Header Ads
Header Ads
Header Ads
Breaking News

ರೈಲು ಬಡಿದು ಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ಮನವಿ.

ಉಡುಪಿ,ಸೆ. ೪: ಇಂದ್ರಾಣಿ.ರೈಲ್ವೆ ಸೇತುವೆ ಬಳಿ ಅಪರಿಚಿತ ವ್ಯಕ್ತಿಗೆ ರೈಲು ಬಡಿದು ವ್ಯಕ್ತಿ ಸ್ಥಳದಲ್ಲೆ ಸಾವನಪ್ಪಿದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ವ್ಯಕ್ತಿಯು ರೈಲು ಹಳಿಯ ಸನಿಹದಿಂದ ನಡೆದು ಕೊಂಡು ಹೋಗತ್ತಿರುವಾಗ, ಬೆಳಿಗ್ಗೆ ೭-೨೦ ರ ಸುಮಾರಿಗೆ, ಎರ್ನಾಕುಲಂನಿಂದ ಅಜ್ಮೀರ್ ಗೆ ಹೋಗುವ ರೈಲು ಬಡಿದು ಸಾವು ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ.ಸಾವಿಗೆ ನಿಖರವಾದ ಕಾರಣ ಲಭ್ಯವಾಗಲಿಲ್ಲ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯು ಅಪರಿಚಿತ, ಬಿಳಿ ಗಡ್ಡಧಾರಿಯಾಗಿದ್ದು, ಉದ್ದವಾದ ಕಪ್ಪು ತಲೆ ಕೂದಲಿದೆ. ಅಂದಾಜು ೬೫ ವರ್ಷ ಪ್ರಾಯದವನಾಗಿದ್ದು, ಸದೃಡ ದೇಹಕಾಯ ಹೊಂದಿದ್ದಾನೆ. ಅರ್ದ ಕೈತೋಳಿನ ಶರ್ಟು, ನೀಲಿ ಬಣ್ಣದ ಒಳ ಉಡುಪು, ಬರ್ಮುಡ ಚಡ್ಡಿ ಧರಿಸಿದ್ದಾನೆ. ವಾರಸುದಾರರು ಮಣಿಪಾಲ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಸ್ಥಳ ಪರಿಶೀಲನೆ ನಂತರ ಶವವನ್ನು ಮಣಿಪಾಲದ ಶವಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಶಿರೂರು ತಾರಾನಾಥ್ ಮೇಸ್ತ ಅವರು ಇಲಾಖೆಗೆ ಸಹಕಾರ ನೀಡಿದರು.

Related posts

Leave a Reply