Header Ads
Header Ads
Breaking News

ರೈಲ್ವೆ ಹಳಿಮೇಲೆ ಅರೆ ನಗ್ನ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

ಪುತ್ತೂರಿನ ನೆಹರೂ ನಗರ ರೈಲ್ವೆ ಬ್ರಿಡ್ಜ್ ಹತ್ತಿರ ರೈಲ್ವೆ ಹಳಿಮೇಲೆ ಅಪರಿಚಿತ ಶವವೊಂದು ಪತ್ತೆಯಾಗಿದೆ. ಅರೆ ನಗ್ನ ಸ್ಥಿತಿಯಲ್ಲಿ ಕಂಡು ಬಂದಿರುವ ಈ ಶವದ ತಲೆ ಭಾಗದಲ್ಲಿ ದೊಡ್ಡ ಗಾಯದ ಗುರುತು ಇದ್ದು ತಲೆಯೊಳಗಿನಿಂದ ಮೆದುಳು ಹೊರ ಬಂದಿದೆ. ಶವದ ಗುರುತು ಪತ್ತೆಯಾಗಿಲ್ಲ. ದೇಹದ ಬೆನ್ನಿನ ಭಾಗದಲ್ಲಿ ಗಾಯದ ಗುರುತು ಕಾಣಿಸಿದೆ. ಇದು ಹಳೇ ಗಾಯವಾಗಿದೆ ಎಂದು ಸಂಶಯಿಸಲಾಗಿದೆ. ತಲೆಯ ಸ್ವಲ್ಪ ಭಾಗದಲ್ಲಿ ಮಾತ್ರ ಗಾಯದ ಗುರುತು ಇದ್ದು, ಉಳಿದ ಭಾಗಕ್ಕೆ ಯಾವುದೇ ಹಾನಿಯಾಗದೇ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಕೊಲೆ ಮಾಡಿ ದೇಹವನ್ನು ಇಲ್ಲಿ ಬಿಸಾಕಿರುವ ಅಥವಾ ರೈಲಿಗೆ ತಲೆಯಿಟ್ಟು ಆತ್ಮ ಹತ್ಯೆ ಮಾಡಿರುವ ಎರಡು ಸಾಧ್ಯತೆಯನ್ನು ಇದು ತೆರೆದಿಟ್ಟಿದೆ. ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಅಗಮಿಸಿ ತನಿಖೆ ನಡೆಸುತಿದ್ದಾರೆ.

Related posts

Leave a Reply

Your email address will not be published. Required fields are marked *