Header Ads
Header Ads
Breaking News

ರೈಲ್ವೇ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹ : ಪುತ್ತೂರು ಎಪಿಎಂಸಿ ಬಳಿಯಿರುವ ರೈಲ್ವೇ ಗೇಟ್

 

ಪುತ್ತೂರು ಎಪಿಎಂಸಿ ಬಳಿಯಿರುವ ರೈಲ್ವೇ ಗೇಟ್ ಗೆ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ಪುತ್ತೂರು ಕಾಂಗ್ರೇಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಳೆದ ಹಲವು ವರ್ಷಗಳಿಂದ ಈ ಬೇಡಿಕೆಯನ್ನು ಸ್ಥಳೀಯರು ರೈಲ್ವೆ ಇಲಾಖೆಯ ಮುಂದೆ ನೀಡುತ್ತಾ ಬಂದಿದ್ದರೂ, ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಅಲ್ಲದೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸಂಸದರ ವೈಫ್ಯಲ್ಯದಿಂದಾಗಿ ಈ ಬೇಡಿಕೆ ಈಡೇರಿಲ್ಲ ಎನ್ನುವ ಆರೋಪವನ್ನೂ ಮಾಡಿದರು.

Related posts

Leave a Reply