Header Ads
Header Ads
Breaking News

ರೈಲ್ವೇ ಮೇಲ್ಸೇತುವೆ ವಿಷಯದಲ್ಲಿ ಗೂಬೆ ಕೂರಿಸುವುದು ಸರಿಯಲ್ಲ : ನಳಿನ್ ಕುಮಾರ್ ಕಟೀಲ್ ಹೇಳಿಕೆ

ಕಳೆದ 70 ವರ್ಷಗಳಲ್ಲಿ ರಾಜ್ಯ, ಕೇಂದ್ರವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರದಿಂದ ದೇಶ ಬಿಡಿ ದ.ಕ.ಜಿಲ್ಲೆಗೆ ಏನು ಕೊಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ. ಅದನ್ನು ಬಿಟ್ಟು ರೈಲ್ವೇ ಮೇಲ್ಸೇತುವೆ ವಿಷಯದಲ್ಲಿ ಕೇಂದ್ರ ಸರಕಾರ, ಸಂಸದರ ಮೇಲೆ ಪ್ರತಿಭಟನೆಯ ಮೂಲಕ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಅವರು ಮಧ್ಯಮದವರೊಂದಿಗೆ ಮಾತನಾಡಿ, ರೈಲ್ವೇ ಇಲಾಖೆಗೆ ಅದರದ್ದೇ ಆದ ನೀತಿ ನಿಯಮಗಳಿದ್ದು. ಕಾಂಗ್ರೆಸ್‍ಗೆ ರೈಲ್ವೇಯ ಬಗ್ಗೆ ಇರುವ ನೀತಿ ನಿಯಮಗಳೇ ಗೊತ್ತಿಲ್ಲ. ಅಂತದ್ದರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ಅದನ್ನು ನಾವು ಮಾಡಿ ತೋರಿಸುತ್ತೇವೆ ಎನ್ನುವುದಕ್ಕೆ ಅರ್ಥವೇ ಇಲ್ಲ. ಮಂಗಳೂರಿನಲ್ಲಿ ಈಗಾಗಲೇ ಕೇಂದ್ರ ಸರಕಾರದಿಂದ ವತಿಯಿಂದ ಐದು ಫ್ಲೈಓವರ್‍ಗಳನ್ನು ನಿರ್ಮಿಸಿದ್ದೇವೆ. ಆದರೆ ಕಾಂಗ್ರೆಸ್ ಒಂದೇ ಒಂದು ಫ್ಲೈಓವರ್ ನಿರ್ಮಿಸಿಲ್ಲ ಎಂದ ಅವರು, ಕೇಂದ್ರ ಸರಕಾರದ 14ನೇ ಹಣಕಾಸು ಯೋಜನೆಯಡಿ ಪುತ್ತೂರು ನಗರಕ್ಕೆ 22 ಕೋಟಿ ನೀಡಿದ್ದೇವೆ. ರಾಜ್ಯ ಸರಕಾರದಿಂದ ಪುತ್ತೂರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರಕಾರ ಆಡಳಿತಕ್ಕೆ ಬಂದರೆ ಕೇವಲ ಮೂರು ತಿಂಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿಕೆ ನೀಡಿದ ರಾಹುಲ್ ಗಾಂಧಿಯವರಿಗೆ ಇದುವರೆಗೂ ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

Related posts

Leave a Reply

Your email address will not be published. Required fields are marked *