Header Ads
Header Ads
Header Ads
Breaking News

ರೈ ಎಸ್ಟೇಟ್ಸ್ ಜನಸೇವಾ ಕೇಂದ್ರದಿಂದ ಮನೆ ಹಸ್ತಾಂತರ 5ಲಕ್ಷ ರೂ ವೆಚ್ಚದಲ್ಲಿ ಮೂರು ಮನೆಗಳ ನಿರ್ಮಾಣ

ರೈ ಎಸ್ಟೇಟ್ಸ್ ಜನಸೇವಾ ಕೇಂದ್ರದಿಂದ ಫಲಾನುಭವಿಗಳಿಗೆ 3 ಮನೆಗಳ ಹಸ್ತಾಂತರ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಿತು.ಮುಂಡೂರಿನ ಬದಿಯಡ್ಕದಲ್ಲಿ ಜನಸೇವಾ ಕೇಂದ್ರದ ಯೋಜನೆಯಲ್ಲಿ ನಿರ್ಮಾಣ ಮಾಡಿದ ಮನೆಗಳನ್ನು ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ. ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ವೇಳೆ ಮಾತನಾಡಿದ ಅವರು, ಸಮಾಜಮುಖಿ ಚಿಂತನೆಯೊಂದಿಗೆ ಆರಂಭವಾಗಿರುವ ರೈ ಎಸ್ಟೇಟ್ಸ್ ಜನಸೇವಾ ಕೇಂದ್ರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದ್ದೇಶವಾಗಿದ್ದು, ಈ ಮೂಲಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆಶಯವನ್ನು ಈಡೇರಿಸುವ ಕಾರ್ಯವನ್ನು ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ,ತಾಲೂಕು ಪಂಚಾಯತ್ ಸದಸ್ಯ ಶಿವರಂಜನ್, ಎಪಿಎಂಸಿ ನಿರ್ದೇಶಕಿ ತ್ರಿವೇಣಿ ಪೆರ್‍ವೋಡಿ, ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ ಉಪಸ್ಥಿತರಿದ್ದರು.

Related posts

Leave a Reply