Header Ads
Header Ads
Breaking News

ರೋಗಿಗಳ ಜೀವಕ್ಕೆ ಕುತ್ತು ತರುವ ಹುಳದ ಗೂಡು ಶಿರಾಲಿ ಆರೋಗ್ಯ ಸಮುದಾಯದ ಹಿಂಬದಿಯ ಮರ ಮುಡಿ ಭಂಡಾರ ಕಟ್ಟಿದ ಹುಳದ ಗೂಡು ಸುತ್ತಮುತ್ತಲಿನ ಜನರಲ್ಲಿ ಭಯದ ವಾತಾವರಣ

ಭಟ್ಕಳ ತಾಲುಕಿನ ಶಿರಾಲಿಯ ಸಮುದಾಯ ಆರೋಗ್ಯ ಭವನಕ್ಕೆ ಬರುವ ರೋಗಿಗಳ ಜೀವಕ್ಕೆ ಕುತ್ತು ಉಂಟಾಗುವಂತಹ ದೊಡ್ಡ ಅನಾಹುತಕ್ಕೆ ಶಿರಾಲಿ ಸಮುದಾಯ ಆರೋಗ್ಯ ಭವನ ಸಾಕ್ಷಿಯಾಗಲಿದೆ. ಅದುವೇ ಭವನದ ಹಿಂಬದಿಯ ಮರವೊಂದರಲ್ಲಿ ಬೃಹದಾಕಾರವಾಗಿ ಕಟ್ಟಿದ ಮುಡಿ ಬಂಡಾರ ಹುಳದ ಗೂಡೊಂದು ಸದ್ಯ ಸುತ್ತಮುತ್ತಲು ಭಯದ ವಾತಾವರಣ ನಿರ್ಮಾಣವಾಗಿದೆ.

ಭಟ್ಕಳ ತಾಲುಕಿನ ಶಿರಾಲಿಯ ಸಮುದಾಯ ಆರೋಗ್ಯ ಭವನದ ಆಸ್ಪತ್ರೆಯ ಆವರಣದಲ್ಲಿ ಬೃಹದಾಕಾರದಲ್ಲಿ ಮುಡಿ ಬಂಡಾರ ಹುಳುವಿನ ಗೂಡು ಕಟ್ಟಿದ್ದು ಸದ್ಯ ಇದು ಆಸ್ಪತ್ರೆಯ ರೋಗಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಭೀತಿ ಉಂಟಾಗಿದೆ. ಸರಿ ಸುಮಾರು 25 ಕೆ.ಜಿ. ಅಕ್ಕಿ ಮುಟೆಯಷ್ಟು ಗಾತ್ರದಲ್ಲಿ ಕಟ್ಟಿದ ಮುಡಿ ಬಂಡಾರ ಹುಳುವಿನ ಗೂಡು ಇದ್ದು, ಹುಳು ದಾಳಿ ಮಾಡಿದರೆ ಮನುಷ್ಯ ಸಾವನ್ನಪ್ಪುವ ಸ್ಥಿತಿಗೆ ಹೋಗುತ್ತದೆ. ಶಿರಾಲಿಯ ಈ ಆರೋಗ್ಯ ಭವನದ ಪಕ್ಕದಲ್ಲೇ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸೇರಿದಂತೆ ಎರಡು ಶಾಲೆ, 20ಕ್ಕೂ ಅಧಿಕ ಮನೆಗಳಿದ್ದು, ದಿನಿತ್ಯ ಓಡಾಡುವ ಜನರಿಗೂ ಇದು ಕಂಟಕಪ್ರಾಯವೇ ಸರಿ. ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಜವಾಬ್ದಾರಿ ವಹಿಸಿ ಶಿರಾಲಿ ಗ್ರಾಮ ಪಂಚಾಯತ್‌ಗೆ ಮಾಹಿತಿ ತಿಳಿಸಬೇಕಾದ ಅನಿವಾರ್ಯತೆ ಇದ್ದು, ಒಂದು ವೇಳೆ ಹುಳದ ಗೂಡನ್ನು ಸ್ಥಳಾಂತರಗೊಳಿಸದಿದ್ದರೆ ಆಸ್ಪತ್ರೆಯ ರೋಗಿಗಳಿಗೆ ಮಾರಕವಾಗುದಂತು ಸತ್ಯ. ಒಂದು ಹುಳು ಒಬ್ಬ ವ್ಯಕ್ತಿಗೆ ಕಚ್ಚಿದರೆ ಅದರ ನೋವಿನ ಪ್ರಭಾವ 24 ತಾಸಿನವರೆಗು ಹಸ ಇರುತ್ತದೆ.

ಅದೇ ಒಬ್ಬ ವ್ಯಕ್ತಿಗೆ 5ಕ್ಕಿಂತ ಹೆಚ್ಚು ಹುಳು ಕಚ್ಚಿದರೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪುವ ಸಂಧರ್ಬ ಉಂಟಾಗುತ್ತದೆ. ಮುಖ್ಯವಾಗಿ ಇಲ್ಲಿನ ಸ್ಥಳಿಯ ಶಿರಾಲಿ ಗ್ರಾಮ ಪಂಚಾಯತ್ ಈ ಗೂಡಿನ ತೆರವು ಕಾರ್ಯ ಮಾಡಬೇಕಾಗಿದ್ದು, ಜೀವಕ್ಕೆ ಕುತ್ತು ಬರುವಂತಹ ಹುಳವನ್ನು ಹಾಗೂ ಅದರ ಗೂಡನ್ನು ತೆಗೆಯುವ ಕಾರ್ಯ ಆಗಲೇಬೇಕಾಗಿದೆ. ಇಲ್ಲವಾದಲ್ಲಿ ಜೋರಾದ ಗಾಳಿ ಅಥವಾ ಯಾರಾದರು ಕಿಡಿಗೇಡಿಗಳು ಗೂಡಿಗೆ ಕಲ್ಲು ಹೊಡೆದರೆ ಮುಡಿ ಬಂಡಾರ ಹುಳುವಿನ ದಾಳಿ ಭಯಂಕರವಾಗಿರುತ್ತದೆ.
ವರದಿ: ರಾಘವೇಂದ್ರ ಮಲ್ಯ ಭಟ್ಕಳ