Header Ads
Breaking News

ರೋಟರಿ ಕ್ಲಬ್ ಕಾರ್ಕಳ ಇವರ ವತಿಯಿಂದ ಇಫ್ತಾರ್ ಕೂಟ

ಕಾರ್ಕಳ ಆನೆಕೆರೆ ರಯಾನ್ ಮಸೀದಿಯಲ್ಲಿ ರೋಟರಿ ಕ್ಲಬ್ ಕಾರ್ಕಳ ಇವರ ವತಿಯಿಂದ ಇಪ್ತಿಹಾರ್ ಕೂಟ ನೆರವೇರಿತು ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಶೈಲೆಂದ್ರ ರಾವ್ ರಂಜಾನ್ ಮಾಸ ಮುಸ್ಲಿಂರಿಗೆ ಪವಿತ್ರವಾದ ತಿಂಗಳಾಗಿರುತ್ತದೆ. ರಂಜಾನ್‌ನಲ್ಲಿ ಪವಿತ್ರ ಕುರಾನ್ ಭೂಮಿಗೆ ಅನಾವರಣಗೊಂಡ ತಿಂಗಳಾಗಿರುತ್ತದೆ ಎಂದು ಹೇಳಿದರು. ನಂತರ ಮಾತನಾಡಿದ ನಿಕಟಪೂರ್ವ ಅಧ್ಯಕ್ಷರಾದ ಡಾಕ್ಟರ್ ಮಹದೇವ ಗೌಡ ಎಲ್ಲಾಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಡು ಬೇಸಿಗೆಯಲ್ಲಿ ಕೂಡ ಉಪವಾಸ ವ್ರತವನ್ನು ಆಚರಿಸುತ್ತಾರೆ. ಉಪವಾಸದಿಂದ ನಮ್ಮ ಶರೀರದಲ್ಲಿರುವ ರೋಗಾಣುಗಳು ನಾಶವಾಗುತ್ತದೆ ಎಂದು ವಿಜ್ಞಾನಿಗಳು ಹಲವು ವರ್ಷಗಳ ಹಿಂದೆಯೇ ಹೇಳಿದ್ದಾರೆ ಎಂದು ಹೇಳಿದರು. ನಂತರ ಮಾತನಾಡಿದ ಅಧ್ಯಾಪಕರಾದ, ವಸಂತ ರವರು ರಂಜಾನ್ ತಿಂಗಳು ಸೌಹಾರ್ದತೆಯ ತಿಂಗಳಾಗಿರುತ್ತದೆ ಎಂದು ಹೇಳಿದರು. ನಂತರ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ವೇದಿಕೆಯಲ್ಲಿ ಇಕ್ಬಾಲ್ ಅಹಮದ್, ಬಾಲಕೃಷ್ಣ ದೇವಾಡಿಗ ಮುಕ್ತಾರ್ ಅಹಮದ್, ಗಣೇಶ ಸಾಲಿಯಾನ್, ಮೋಹಮ್ಮದ್ ಅಸ್ಲಂ, ಮೆಹಬೂಬ್ ಪಾಷಾ ಉಪಸ್ಥಿತರಿದ್ದು ಇಕ್ಬಾಲ್ ಅಹಮದ್ ಧನ್ಯವಾದ ಸಮರ್ಪಿಸಿದರು.

Related posts

Leave a Reply

Your email address will not be published. Required fields are marked *