Header Ads
Header Ads
Header Ads
Breaking News

ರೋಟರಿ ಬ್ಲಡ್ ಮೊಬೈಲ್ ಬ್ಲಡ್ ಡೊನೇಶನ್ ಬಸ್‌ಗೆ ಚಾಲನೆ ಡಾ. ಜಿ. ಶಂಕರ್‌ರಿಂದ ಉದ್ಘಾಟನೆ ಸಂತ ಅಲೋಶಿಯಸ್ ಲೊಯೊಲಾ ಹಾಲ್ ಗ್ರೌಂಡ್‌ನಲ್ಲಿ ಕಾರ್ಯಕ್ರಮ

 

ರೋಟರಿ ಕ್ಲಬ್ ಮಂಗಳೂರು ವತಿಯಿಂದ ಬ್ಲಡ್ ಡೋನೇಶನ್ ಬಸ್‌ಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಲೊಯೊಲಾ ಹಾಲ್ ಮೈದಾನದಲ್ಲಿ ಚಾಲನೆ ನೀಡಲಾಯಿತು.ರೋಟರಿ ಬ್ಲಡ್ ಮೊಬೈಲ್‌ಗೆ ನಾಡೋಜ ಡಾ. ಜಿ. ಶಂಕರ್ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜಕ್ಕೆ ಉಪಯೋಗವಾಗುವ ಕಾರ್ಯವನ್ನು ರೋಟರಿ ಕ್ಲಬ್ ಮಂಗಳೂರು ಮಾನವೀಯತೆಯ ನೆಲೆಯಲ್ಲಿ ಮಾಡುತ್ತಿದೆ ಎಂದು ಹೇಳಿದ ಅವರು ಬ್ಲಡ್ ಡೊನೇಶನ್ ಬಸ್‌ಗೆ ಶುಭ ಹಾರೈಸಿದರು.ಅನಂತರ ಅಪರ ಜಿಲಾಧಿಕಾರಿ ಕುಮಾರ್ ಮಾತನಾಡಿ,ಸಮಾಜಕ್ಕೆ ಸಹಕಾರಿಯಾದಂತ ಉತ್ತಮವಾದ ಕೆಲಸವನ್ನು ರೋಟರಿ ಕ್ಲಬ್ ಮಂಗಳೂರು ಮಾಡುತ್ತಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರಲಿ ಎಂದು ಹಾರೈಸಿದರುಈ ಸಂದರ್ಭ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಎಮ್.ಎಮ್. ಚಂಗಪ್ಪ, ಕಾರ್ಯದರ್ಶಿ ನವೀನ್ ಎನ್, ರೋಟರಿ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಹೆಚ್. ವಸಂತ ಶೆಣೈ, ಯತೀಶ್ ಬೈಕಂಪಾಡಿ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply