Header Ads
Header Ads
Breaking News

ರೋಹನ್ ಕಾರ್ಪೋರೇಶನ್‍ನ ಮತ್ತೊಂದು ಯೋಜನೆ : ಹೈ ಕ್ರೆಸ್ಟ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ರೋಹನ್ ಕಾರ್ಪೋರೇಶನ್‍ನ ಮತ್ತೊಂದು ವಸತಿ ಸಮುಚ್ಚಯ ತಲೆ ಎತ್ತಲಿದೆ. ಮಂಗಳೂರಿನ ಕದ್ರಿ ಕಂಬಳದಲ್ಲಿ ಇಂದು ಹೈ ಕ್ರೆಸ್ಟ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮವು ನಡೆಯಿತು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮಗುರುಗಳಾದ ರೆ.ಫಾ. ಸಂತೋಷ್ ಕಾಮತ್ ಹಾಗೂ ರೆ.ಫಾ. ವಿನೋದ್ ಲೋಬೋ ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.ಹೈ ಕ್ರೆಸ್ಟ್ ವಸತಿ ಸಮುಚ್ಚಯದ ಬ್ರೌಶರ್‍ರನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಸಚಿವರು ರೋಹನ್ ಮೊಂತೆರೋ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುವ ಉತ್ತಮ ಬಿಲ್ಡರ್ ಮಾತ್ರವಲ್ಲದೆ, ಮಾದರಿ ವ್ಯಕ್ತಿ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತಿಸಿ ಮಾತನಾಡಿದ ರೋಹನ್ ಕಾರ್ಪೋರೇಶನ್‍ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೋ, ಕಳೆದ 25 ವರ್ಷಗಳ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸುಮಾರು 3000ಕ್ಕೂ ಅಧಿಕ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಅಭಿಮಾನ ಇದೆ ಎಂದರು.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮೇಯರ್ ಭಾಸ್ಕರ್ ಕೆ., ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಶಾಸಕ ವೇದವ್ಯಾಸ ಕಾಮತ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯ ಪ್ರಕಾಶ್ ಸಾಲಿಯಾನ್, ನಗರದ ಖ್ಯಾತ ಸಿಎ ರಾಮುಲು ನಾಯ್ಡು, ಪ್ಲಾಮಾ ಬಿಲ್ಡರ್ಸ್ ಆಡ್ ಡೆವಲಪರ್ಸ್ ನ ರಝಾಕ್, ಕ್ರೆಡೈನ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್, ಬಿಲ್ಡರ್ ಕೆ.ಸಿ. ನಾಯ್ಕೆ, ನಿವೇಶನದ ಮಾಲಕ ಅರ್ಬಿಚ್ಚ, ಹರಿಕೃಷ್ಣ ಬಂಟ್ವಾಳ ಮೊದಲಾದವರ ಉಪಸ್ಥಿತರಿದ್ದರು.
ಹೈ ಕ್ರೆಸ್ಟ್ ವಸತಿ ಸಮುಚ್ಚಯವು ರೋಹನ್ ಕಾರ್ಪೋರೇಶನ್‍ ಲಾಂಛನದ ಅಡಿಯಲ್ಲಿ ಪ್ರಾಪರ್ಟಿ ಇನ್‍ಪ್ರಾಟೆಕ್ ಇಂಡಿಯಾ ಪ್ರೈವೆಟ್ ಲಿಮಿಟ್ ಸಂಸ್ಥೆಯ ನೂತನ ಯೋಜನೆಯಾಗಿದೆ.

ಶಾಲೆ, ವಿವಿಧ ಶ್ರದ್ಧಾ ಕೇಂದ್ರಗಳು, ಮಾರುಕಟ್ಟೆ, ಬಸ್ ನಿಲ್ದಾಣ ಹೀಗೆ ಎಲ್ಲದಕ್ಕೂ ಸಮೀಪವಿರುವ ಕದ್ರಿ ಕಂಬಳ ರಸ್ತೆಯಲ್ಲಿ 14 ಮಹಡಿಗಳ ಪ್ರತಿಷ್ಠಿತ ಹೈ ಕ್ರೆಸ್ಟ್ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ.

Related posts

Leave a Reply