Header Ads
Header Ads
Breaking News

ರೌಡಿ ಶೀಟರ್ ನವೀನ್ ಡಿ’ಸೋಜ ಕಗ್ಗೋಲೆ ಶಿಪ್ಟ್ ಕಾರಿನಲ್ಲಿ ಬಂದ ನಾಲ್ವರ ಕೃತ್ಯ ಕಾಂಜರಕಟ್ಟೆ ಬಾರ್ ಮುಂಭಾಗ ಮಾರಕಾಯುಧದಿಂದ ಹತ್ಯೆ

ಪಡುಬಿದ್ರಿ: ರೌಡಿ ಶೀಟರ್ ಒರ್ವನನ್ನು ಕಾಂಜರಕಟ್ಟೆ ಬಾರಿನಲ್ಲಿ ಬುಧವಾರ ರಾತ್ರಿ ಹತ್ತರ ಸುಮಾರಿಗೆ ಕುಡಿದು ತನ್ನ ಗೆಳೆಯರೊಂದಿಗೆ ಬಾರಿಂದ ಹೊರ ಬಂದು ಬೈಕ್ ಹತ್ತಿ ಮುಂದೆ ಹೋಗಲು ಹಣಿಯಾಗುತ್ತಿದಂತೆ ಶಿಪ್ಟ್ ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ಮಾರಾಕಾಯುಧದಲ್ಲಿ ಮನಬಂದಂತೆ ಕಡಿದು ಕೊಲೆ ಮಾಡಿ ಪರಾರಿಯಾಗಿದೆ.

ಕೊಲೆಯಾದಾತ ಸಾಂತೂರು ಕಾಂಜರಕಟ್ಟೆ ದರ್ಕಾಸ್ ಮನೆ ಮೌರಿಸ್ ಡಿಸೋಜ ಎಂಬವರ ಪುತ್ರ ನವೀನ್ ಡಿಸೋಜ(38). ಕಾರು ಚಾಲಕನಾಗಿದ್ದ ಈತ ಈ ಹಿಂದೆ ಪಡುಬಿದ್ರಿ ಪರಿಸರದಲ್ಲಿ ಕಾರು ಓಡಿಸಿ ಜೀವನ ಸಾಗಿಸುತ್ತಿದ್ದು, ಈ ಸಂದರ್ಭ ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿ ಪದೇ ಪದೇ ಪೊಲೀಸರ ಅಥಿತಿಯಾಗುತ್ತಿದ್ದ. ಬೆಂಗಳೂರು ಕಡೆ ಇದ್ದ ಈತ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಮರಳಿದ್ದು, ತನ್ನಿಬ್ಬರು ಗೆಳೆಯರೊಂದಿಗೆ ಕುಡಿದು ಬಾರಿಂದ ಹೊರ ಬಂದಾಗ ಈತನಿಗಾಗಿ ದೂರದಲ್ಲಿ ಕಾಯುತ್ತಿದ್ದ ನಾಲ್ವರು ದುಷ್ಕರ್ಮಿಗಳು ಈತ ಬೈಕ್ ಹತ್ತು ತ್ತಿದಂತೆ ಕಾರು ಚಲಾಯಿಸಿಕೊಂಡು ಬೈಕ್ಕಿಗೆ ಡಿಕ್ಕಿಯೋಡೆದಿದ್ದಾರೆ.ಬೈಕ್ ಮುಗುಚಿ ಬೀಳುತ್ತಿದಂತೆ ಈತನೊಂದಿಗಿದ್ದ ಇಬ್ಬರು ಗೆಳೆಯರು ಪರಾರಿಯಾದರೆ, ರೌಡಿ ಶೀಟರ್ ನವೀನ್ ಡಿಸೋಜ ಸಿಕ್ಕಿ ಬಿದ್ದಿದ್ದ. ಆತನಿಗಾಗಿಯೇ ಕಾಯುತ್ತಿದ್ದರೋ ಎಂಬಂತ್ತೆ ಮಾರಾಕಾಯುಧದಿಂದ ಆತನನ್ನು ಯದ್ವಾತದ್ವ ಕಡಿದು ಕೊಲೆ ಮಾಡಿ ತಾವು ಬಂದ ಶೀಪ್ಟ್ ಕಾರಿನಲ್ಲಿ ಪಲಾಯನ ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ ಕಡಿತ ಪರಿಣಾಮ ಆತನ ಒಂದು ಕಿವಿ ಸಹಿತ ಕಿವಿಯೋಳೆ ಸಹಿತ ಸ್ಥಳದಲ್ಲಿ ಬಿದ್ದಿತ್ತು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ರೌಡಿ ಶೀಟರ್ ಆಗಿರುವ ಈತನ ಕೊಲೆ ಪೂರ್ವ ಧ್ವೇಶದಿಂದಲೇ ಆಗಿದ್ದು, ಆತನೊಂದಿಗಿದ್ದ ಇಬ್ಬರ ಗುರುತು ಪತ್ತೆಯಾಗಿದ್ದು ಹಾಗೂ ಬಾರಿನ ಮುಂಭಾಗ ಪಾನ್‌ಬೀಡ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೋ ಈ ಕೊಲೆಯನ್ನು ಗಮನಿಸಿದ್ದಾರೆ. ಅದಲ್ಲದೆ ಈ ಕೃತ್ಯ ಸಿಸಿ ಕ್ಯಾಮಾರದಲ್ಲೂ ಸೆರೆಯಾಗಿದ್ದು ತನಿಖೆಗೆ ಪೂರಕ ಅಂಶವಾಗಲಿದೆ ಎಂದಿದ್ದಾರೆ. ಸ್ಥಳೀಯರು ಹೇಳುವಂತೆ ವಿಪರೀತ ಕುಡಿಯುತ್ತಿದ್ದ ಈತನ ಆರೋಗ್ಯ ಸಂಪೂರ್ಣ ಕೈ ಕೊಟ್ಟಿದೆ. ಕೊಲೆಯಾಗದಿದ್ದರೂ ಆತ ಹೆಚ್ಚು ಸಮಯ ಬದುಕುವುದು ಅಸಾಧ್ಯವಾಗಿತ್ತು ಎನ್ನುತ್ತಾರೆ. ಸ್ಥಳಕ್ಕೆ ಜಿಲ್ಲಾಎಸ್ಪಿ ಲಕ್ಷ್ಮಣ್ ನಿಂಬರಗಿ, ಎಎಸ್ಪಿ ಹೃಷಿಕೇಶ್, ಕಾಪು ಸರ್ಕಲ್ ಹಾಲಮೂರ್ತಿ ರಾವ್, ಪಡುಬಿದ್ರಿ ಎಸೈ ಸತೀಶ್ ಸಿಬ್ಬಂಧಿಗಳೊಂದಿಗೆ ಸ್ಥಳದಲ್ಲಿದ್ದರು.
ವರದಿ: ಸುರೇಶ್ ಪಡುಬಿದ್ರಿ