Header Ads
Header Ads
Breaking News

ರ್‍ಯಾಪಿಡೋ ಬೈಕ್-ಟಾಕ್ಸಿ ವತಿಯಿಂದ ಬೈಕ್ ಸವಾರರಿಗೆ ಜಾಗ್ರತಿ ಕಾರ್ಯಕ್ರಮ

ರಸ್ತೆ ಸುರಕ್ಷತಾ ಮಾಸಿಕ ಸಪ್ತಾಹದ ಅಂಗವಾಗಿ ಬೆಂಗಳೂರು ಮೂಲದ ರ್‍ಯಾಪಿಡೋ ಬೈಕ್ ಮಂಗಳೂರಿನಲ್ಲಿ ಅಧಿಕೃತವಾಗಿ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ರ್‍ಯಾಪಿಡೋ ಬೈಕ್ ಟಾಕ್ಸಿ ವತಿಯಿಂದ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದಲ್ಲಿ ನಡೆಯಿತು.ಕಂಪನಿಯು ಹಲವು ವರ್ಷಗಳ ಹಳೆಯದಾದ ನಾಲ್ಕು ಚಕ್ರದ ಟ್ಯಾಕ್ಸಿ ಪದ್ಧತಿಗೆ ತಿಲಾಂಜಲಿ ಹಾಕಿ ಅದನ್ನು ಬೈಕ್‌ಗಳಿಗೆ ಬದಲಾಯಿಸಿದಂತಾಗಿದೆ. ರ್‍ಯಾಪಿಡೋದ ಸೇವೆಗಳು ದಕ್ಷಿಣ ಭಾರತದಲ್ಲಿ ಅತ್ಯಂತ ವಿಸ್ತಾರವಾಗಿ ಲಭ್ಯವಾಗುತ್ತಿವೆ ಮತ್ತು ಜನಮನ್ನಣೆಯನ್ನು ಗಳಿಸಿವೆ. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಸೇವೆಯನ್ನು ಕ್ರಮೇಣವಾಗಿ ದೇಶಾದ್ಯಂತ ವಿಸ್ತರಿಸಲು ಯೋಜನೆಗಳನ್ನು ರೂಪಿಸಿದೆ. ಈ ಬೈಕ್ ಸೇವೆಯನ್ನು ಹೆಲ್ಮೆಟ್‌ಗಳನ್ನು ನೀಡುವ ಮೂಲಕ ಆರಂಭಿಸಿದೆ.ಹಣಕಾಸು ಉಳಿತಾಯ, ಸಮರ್ಪಕ ವೆಚ್ಚ ನಿರ್ವಹಣೆ, ಇಂಧನ ಕ್ಷಮತೆ ಮತ್ತು ಸಮಯ ಉಳಿತಾಯದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು ರ್‍ಯಾಪಿಡೋದ ಮೂಲ ಉದ್ದೇಶವಾಗಿದೆ.

ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು. ಮಂಗಳೂರಿನ ಕ್ಲಾಕ್ ಟವರ್‌ನಲ್ಲಿ 500ಕ್ಕೂ ಅಧಿಕ ಹೆಲ್ಮೆಟ್‌ನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಅವರು, ಹೆಲ್ಮೆಟ್ ಧರಿಸದೆ ಬೈಕ್ ಚಲಾವಣೆ ಮಾಡುವುದು ಅಪರಾಧ ನಮ್ಮ ಜೀವದ ಜವಾಬ್ದಾರಿಯನ್ನು ನಾವೇ ನೋಡಿಕೊಳ್ಳಬೇಕು ಎಂದರು
ಕಾರ್ಯಕ್ರಮದಲ್ಲಿ ರ್‍ಯಾಪಿಡೋ ಬೈಕ್ ಟಾಕ್ಸಿಯ ಅಸಿಸ್ಟೆಂಟ್ ಮ್ಯಾನೇಜರ್ ಆಶಿಶ್ ಉಪಸ್ಥಿತರಿದ್ದರು.

Related posts

Leave a Reply