Header Ads
Header Ads
Breaking News

ಲಂಡನ್‌ನಲ್ಲಿ ಅಣ್ಣನ ದುಷ್ಕೃತ್ಯ, ತಂಗಿ ಭಾವನ ಕೆಲಸಕ್ಕೆ ಕುತ್ತು

ಕಳೆದ ತಿಂಗಳು ಲಂಡನ್ ಸೇತುವೆ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಖುರಮ್ ಭಟ್ನ ಸೋದರಿ ಹಲೀಮಾ ಭಟ್ ಅವರನ್ನು ಲಂಡನ್ ಇಲ್ಲಿನ ಹೀಥ್ರೂ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಡೇಲಿ ಮಿರರ್ ಪತ್ರಿಕೆ ವರದಿ ಮಾಡಿದೆ.
ಇಪ್ಪತ್ತೆಂಟು ವರುಷದ ಹಲೀಮಾ ಅವರ ಪತಿ ಉಸ್ಮಾನ್ ದರ್ ಅವರೂ ಇಲ್ಲೇ ಕೆಲಸ ಮಾಡುತ್ತಿದ್ದು, ಜೂನ್ ೪ರಂದೇ ಇಬ್ಬರನ್ನೂ ಕೆಲಸದಿಂದ ಅಮಾನತು ಮಾಡಲಾಗಿತ್ತು. ಭದ್ರತಾ ಅಧಿಕಾರಿಗಳು ಅವರ ವಿಚಾರಣೆ ನಡೆಸಿದ್ದರು. ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ಸುರಕ್ಷೆಯೇ ನಮ್ಮ ಆದ್ಯತೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲೀಮಾ ಮತ್ತು ಉಸ್ಮಾನ್ ಖಂಡಿತವಾಗಿಯೂ ಉಗ್ರರಲ್ಲ. ಖುರಮ್ ಕೃತ್ಯ ಅವರಿಗೂ ಬೇಸರ ಮೂಡಿಸಿದೆ ಎಂದು ಅವರ ಕುಟುಂಬದ ಆಪ್ತರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಪ್ರತಿದಾಳಿಯ ವೇಳೆ, ಖುರಮ್ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಕೊಂದು ಹಾಕಿದ್ದರು.

Related posts

Leave a Reply