Header Ads
Header Ads
Breaking News

ಲಂಡನ್ ಏಗಾನ್ ಟೆನಿಸ್ ಚಾಂಪಿಯನ್‌ಶಿಪ್, ಲಿಯಾಂಡರ್ ಮತ್ತು ಬೋಪಣ್ಣ ಸೆಮಿಫಯ್ನಲ್‌ಗೆ

ಖ್ಯಾತ ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಏಗಾನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಕ್ರೋವೇಷಿಯಾದ ಇವಾನ್ ಡೊಡಿಗ್ ಜೋಡಿ ೭-೬, ೪-೬, ೧೦-೨ ರಿಂದ ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಫಿನ್ಲಂಡ್ನ ಹೆನ್ರಿ ಕೊಂಟಿನ್ ಜೋಡಿಯ ವಿರುದ್ಧ ಜಯ ಸಾಧಿಸಿದರು. ಮೊದಲ ಸೆಟ್ ಗೆದ್ದ ಬೋಪಣ್ಣ ಜೋಡಿ ೨ನೇ ಸೆಟ್ ಕಳೆದುಕೊಂಡಿತ್ತು. ಹೀಗಾಗಿ ಮೂರನೇ ಸೆಟ್ ನಿರ್ಣಾಯಕವಾಗಿತ್ತು. ಈ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೋಪಣ್ಣ ಜೋಡಿ ೧೦-೨ ಅಂತರದಿಂದ ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿತು.
ಇದಕ್ಕೂ ಮುನ್ನ ನಡೆದ ಪುರುಷ ಡಬಲ್ಸ್ನ ಮತ್ತೂಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಕೆನಡಾದ ಆದಿಲ್ಶಮಸದಿನ್ ಜೋಡಿ ೭-೬, ೬-೨ರಿಂದ ನೆರ ಸೆಟ್ನಲ್ಲಿಯೇ
ಚಿಲಿ ಮತ್ತು ಬೆಲರೋಷಿಯಾ ಜೋಡಿ ಹ್ಯಾನ್ಸ್ ಪೊಡ್ಲಿಪಿಂಕ್ ಮತ್ತು ಆ್ಯಂಡ್ರೆ ವಸಿಲವಿಸ್ಕಿ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪಂದ್ಯದ ಆರಂಭದಿಂದ ಭರ್ಜರಿ ಹೋರಾಟ ನೀಡಿದ ಪೇಸ್ ಜೋಡಿ ನೇರ ಸೆಟ್ನಲ್ಲಿಯೇ ಜಯ ಸಾಧಿಸಿತು.

Related posts

Leave a Reply